ಕ್ಲಬ್ ಕಾರ್ಯಕರ್ತರು ಶುಚೀಕರಣ ನಡೆಸಿದ ಸ್ಥಳದಲ್ಲಿ ತ್ಯಾಜ್ಯ ಉಪೇಕ್ಷೆ: ವ್ಯಕ್ತಿಯ ದೃಶ್ಯ ಪತ್ತೆ

ಕುಂಬಳೆ:  ನಾಡಿನಾದ್ಯಂತ ಶುಚೀಕರಣ ನಡೆಯುತ್ತಿರು ವಂತೆಯೇ ಮತ್ತೊಂದೆಡೆ  ತೆರೆದ ಸ್ಥಳದಲ್ಲಿ ತ್ಯಾಜ್ಯ ಎಸೆದು ಪರಿಸರ ಮಾಲಿನ್ಯ ಸೃಷ್ಟಿಸಲು ಕೆಲವರು ಯತ್ನಿಸುತ್ತಿರುವುದಾಗಿ  ದೂರಲಾಗಿದೆ. ಕುಂಬಳೆ-ಬದಿಯಡ್ಕ ರಸ್ತೆಯ ಭಾಸ್ಕರ ನಗರ ಸಮೀಪ ಖಾಸಗಿ ಕಾಲೇಜೊಂದರ ಮುಂಭಾಗದಲ್ಲಾಗಿ ವ್ಯಕ್ತಿಯೊಬ್ಬರ ಮನೆಗೆ ತೆರಳುವ ದಾರಿಯಲ್ಲಿ  ತ್ಯಾಜ್ಯ ಉಪೇಕ್ಷಿಸಲಾಗಿದೆ. ಇಂದು ಬೆಳಿಗ್ಗೆ ಗೇಟಿನ ಬಳಿ ತ್ಯಾಜ್ಯಕಂಡುಬಂದ ಹಿನ್ನೆಲೆಯಲ್ಲಿ   ಮನೆ ಮಂದಿ  ಸಮೀಪದ ಸಿಸಿ ಟಿವಿ ಕ್ಯಾಮರಾ ಪರಿಶೀಲಿಸಿದಾಗ ವ್ಯಕ್ತಿಯೋರ್ವ ಇಂದು ಬೆಳಿಗ್ಗೆ ಗೋಣಿಚೀಲದಲ್ಲಿ ತ್ಯಾಜ್ಯವನ್ನು   ತಂದು  ಗೇಟಿನ ಮುಂದೆ  ಉಪೇಕ್ಷಿಸುವ ದೃಶ್ಯ ಕಂಡುಬಂದಿದೆ.  ಇತ್ತೀಚೆಗೆ ಭಾಸ್ಕರನಗರದ ನವೋದಯ ಫ್ರೆಂಡ್ಸ್ ಕ್ಲಬ್ ನೇತೃತ್ವದಲ್ಲಿ ಈ ಪರಿಸರವನ್ನು ಶುಚೀಕರಿಸಲಾಗಿತ್ತು. ಇದರ ಬೆನ್ನಲ್ಲೇ ಇಲ್ಲಿ ತ್ಯಾಜ್ಯ ಎಸೆಯಲಾಗಿದೆ. ಈ ಬಗ್ಗೆ ಮನೆಯ ಮಾಲಕ ಕ್ಲಬ್‌ನ ಪದಾಧಿಕಾರಿಗಳಿಗೆ  ತಿಳಿಸಿದ್ದಾರೆ. ಇದರಂತೆ ಕ್ಲಬ್ ಪದಾಧಿಕಾರಿಗಳು ಕುಂಬಳೆ ಪೊಲೀಸರಿಗೆ  ಹಾಗೂ ಪಂಚಾಯತ್‌ಗೆ ದೂರು ನೀಡಿದ್ದು ತ್ಯಾಜ್ಯ ಎಸೆದ ವ್ಯಕ್ತಿಯನ್ನು ಪತ್ತೆಹಚ್ಚಿ  ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. 

RELATED NEWS

You cannot copy contents of this page