ಕಾಸರಗೋಡು: ಚುನಾವಣೆ ಪ್ರಕ್ರಿಯೆ ಹಾಗೂ ವ್ಯವಸ್ಥೆಗಳ ಬಗ್ಗೆ ತಪ್ಪಾದ ಪ್ರಚಾರ ನಡೆಸಿ ಜನರನ್ನು ಕಲಾಪಕ್ಕೆ ಆಹ್ವಾನ ಒಡ್ಡಿ ಅರಾಜಕತ್ವ ಸೃಷ್ಟಿಸಲಿರುವ ಕಾಂಗ್ರೆಸ್ ಸಹಿತದ ವಿಪಕ್ಷಗಳ ಮತ್ತು ಸಿಜೆಪಿ ಸಹಿತದ ಸಂಘಟನೆಗಳ ಯತ್ನದ ವಿರುದ್ಧ ಬಿಜೆಪಿ ಜಿಲ್ಲೆಯಲ್ಲಿ ವಿವಿಧ ಕಾರ್ಯ ಕ್ರಮಗಳನ್ನು ಹಮ್ಮಿಕೊಂಡು ಪ್ರಜಾಪ್ರಭುತ್ವ ವಿಶ್ವಾಸಿಗಳನ್ನು ಜೋಡಿ ಸಿಕೊಂಡು ಪ್ರಜಾಪ್ರಭುತ್ವ ಸಂರಕ್ಷಣೆ ಕಾರ್ಯಾಗಾರ ವನ್ನು ಆಯೋಜಿಸಲಿದೆ ಎಂದು ಬಿಜೆಪಿ ರಾಜ್ಯ ಸೆಲ್ ಕೋ-ಆರ್ಡಿನೇಟರ್ ಹಾಗೂ ಕಣ್ಣೂರು ವಲಯ ಪ್ರಭಾರಿ ವಿ.ಕೆ. ಸಜೀವನ್ ನುಡಿದರು. ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಮಂದಿರದಲ್ಲಿ ನಡೆದ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳ ಜಿಲ್ಲಾ ಸಮಿತಿ ಸಭೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಚುನಾವಣೆಯಲ್ಲಿ ಸೋಲಿನ ಹೊಣೆಯನ್ನು ಇವಿಎಂ ಮೆಷಿನ್ಗಳ ಮೇಲೆ ಹೊರಿಸಲಿರುವ ಯತ್ನ ಪರಾಜಯಗೊಂಡ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವನ್ನು ತಪ್ಪಿತಸ್ಥರನ್ನಾಗಿ ಮಾಡಲು ಕಾಂಗ್ರೆಸ್ ನೇತೃತ್ವದಲ್ಲಿ ಮೋದಿ ವಿರುದ್ಧ ಪಕ್ಷಗಳು ರಂಗಕ್ಕಿಳಿದಿರುವುದಾಗಿ ವಿ.ಕೆ. ಸಜೀವನ್ ನುಡಿದರು. ಎಡರಂಗ ಹಾಗೂ ಐಕ್ಯರಂಗ ಎರಡಲ್ಲ, ಬದಲಾಗಿ ಒಂದಾಗಿದೆ ಎಂಬ ಬಿಜೆಪಿ ಆರೋಪವನ್ನು ದೃಢೀಕರಿಸುವ ದೃಶ್ಯಗಳು ದೆಹಲಿಯ ಮುಷ್ಕರದಿಂದ ಪ್ರಕಟಗೊಳ್ಳುತ್ತಿದೆ. ಜನರನ್ನು ಸೇರಿಸಿಕೊಂಡು ಪ್ರಜಾಪ್ರಭುತ್ವ ಪರವಾಗಿ ಆಯ್ಕೆಯಾದ ಆಡಳಿತವನ್ನು ಅಧಿಕಾರದಿಂದ ಹೊರ ಹಾಕಲು, ವಿದೇಶಗಳ ಎದುರಲ್ಲಿ ಭಾರತವನ್ನು ಅಪಕೀರ್ತಿಗೊಳಿಸಲಿರುವ ಯತ್ನಗಳನ್ನು ಪ್ರಜಾಪ್ರಭುತ್ವ ಸಂರಕ್ಷಣಾ ಕಾರ್ಯಾಗಾರದ ಮೂಲಕ ಜನರ ಮುಂದಿಡಲಾಗುವುದೆಂದು ಅವರು ನುಡಿದರು. ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ಅಧ್ಯಕ್ಷತೆ ವಹಿಸಿದರು. ಕಣ್ಣೂರು ವಲಯ ಅಧ್ಯಕ್ಷ ಕೆ. ಶ್ರೀಕಾಂತ್, ಕಣ್ಣೂರು ವಲಯ ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ, ಬಿಜೆಪಿ ರಾಜ್ಯ ಸಮಿತಿ ಸದಸ್ಯರಾದ ವಿ. ರವೀಂದ್ರನ್, ಎ. ವೇಲಾಯುಧನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪಿ.ಆರ್. ಸುನಿಲ್, ಎನ್. ಬಾಬುರಾಜ್, ಮನುಲಾಲ್ ಮೇಲತ್ ಮಾತನಾಡಿದರು.






