ಕಾಸರಗೋಡು: ಭಾಷಣದ ಹೆಸರಲ್ಲಿ ಕೇಸು ದಾಖಲಿಸಿಕೊಂಡು ಬಿಜೆಪಿಯ ಬಾಯಿ ಮುಚ್ಚಿಸಲಾಗದು ಎಂದು ಬಿಜೆಪಿ ಕಣ್ಣೂರು ವಲಯ ಅಧ್ಯಕ್ಷ ಕೆ. ಶ್ರೀಕಾಂತ್ ನುಡಿದರು. ಕೇಸಿಗೆ ಹೆದರುವುದಿಲ್ಲ. ಇನ್ನೂ ಭಾಷಣ ಮಾಡುವೆನು. ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ನ ರಾಜಕೀಯ ನಿಲುವುಗಳನ್ನು, ದ್ವಿಮುಖ ನೀತಿಯನ್ನು ಜನರ ಮಧ್ಯೆ ತೆರೆದು ತೋರಿಸುವೆನು. ಕೇಸನ್ನು ಕಾನೂನು ಪರವಾಗಿ ಹಾಗೂ ರಾಜಕೀಯವಾಗಿ ಎದುರಿಸುವುದಾಗಿ ಸುದ್ಧಿಗೋಷ್ಠಿಯಲ್ಲಿ ಅವರು ನುಡಿದರು. ರಾಹುಲ್ ಗಾಂಧಿ ವಿರುದ್ಧ ಮಾತನಾಡಿದರೆಂಬ ಕಾಂಗ್ರೆಸ್ ಶಾಸಕ ಟಿ.ಒ. ಮೋಹನ್ರ ದೂರಿನಂತೆ ಪೊಲೀಸರು ಕೇಸು ದಾಖಲಿಸಿದ್ದಾರೆ. ನಾನು ಮಾಡಿದ ಭಾಷಣದಲ್ಲಿ ವ್ಯಕ್ತಿ ಪರವಾದ ಆಕ್ಷೇಪಗಳು ಇರಲಿಲ್ಲವೆಂದು, ರಾಹುಲ್ ಗಾಂಧಿಯ ರಾಜಕೀಯ ನಿಲುವನ್ನು ವಿವರಿಸುವುದಕ್ಕಾಗಿ ಹೋಲಿಕೆ ಮಾತ್ರ ನಡೆಸುವುದೆಂದು ಅವರು ನುಡಿದರು.
ಕಾಂಗ್ರೆಸ್ ಮುಖಂಡರು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹಸಚಿವ ಅಮಿತ್ ಶಾ ಹಾಗೂ ಇತರ ಬಿಜೆಪಿ ಮುಖಂಡರ ವಿರುದ್ಧ ಅಪಮಾನಕರವಾದ ಪರಾಮರ್ಶೆಗಳನ್ನು ನಡೆಸುವಾಗ ಪೊಲೀಸರು ಸಮಾನವಾದ ಕ್ರಮ ಕೈಗೊಳ್ಳುತ್ತಿಲ್ಲವೆಂದು ಬಿಜೆಪಿ ಮುಖಂಡರ ವಿರುದ್ಧ ದೂರುಗಳ ಆಧಾರದಲ್ಲಿ ಶೀಘ್ರವೇ ಕೇಸು ದಾಖಲಿಸುತ್ತಿರುವುದು ದ್ವಿಮುಖ ನೀತಿಯಾಗಿದೆ ಎಂದು ಶ್ರೀಕಾಂತ್ ಆರೋಪಿಸಿದರು. ರಾಜಕೀಯ ಟೀಕೆಗೆ, ಭಿನ್ನಾಭಿಪ್ರಾಯವಿರುವ ಪ್ರಜಾಪ್ರಭುತ್ವ ಹಕ್ಕು ಎಲ್ಲರಿಗೂ ಏಕರೀತಿಯಲ್ಲಿ ಖಚಿತಪಡಿಸಬೇಕು. ರಾಜಕೀಯ ಒತ್ತಡಗಳಿಗೆ ಮಣಿಯದೆ ಪೊಲೀಸರು ನಿಷ್ಪಕ್ಷವಾಗಿ ಕಾರ್ಯಾಚರಿಸಬೇಕೆಂದು ಅವರು ಆಗ್ರಹಿಸಿದರು.





