ಕಣ್ಣೂರು: ಕಣ್ಣೂರಿನ ಸಾರ್ವಜನಿಕ ಸಭೆಯಲ್ಲಿ ರಾಹುಲ್ ಗಾಂಧಿ ವಿರುದ್ಧ ಆಕ್ಷೇಪ ರೀತಿಯ ಭಾಷಣ ನಡೆಸಿದರೆಂದು ಆರೋಪಿಸಿ ಬಿಜೆಪಿ ಮುಖಂಡನ ವಿರುದ್ಧ ಕೇಸು ದಾಖಲಿಸಲಾಗಿದೆ. ಬಿಜೆಪಿ ಕಣ್ಣೂರು ವಲಯ ಅಧ್ಯಕ್ಷ ಕಾಸರಗೋಡು ತೃಕ್ಕನ್ನಾಡ್ ಕ್ಷೇತ್ರ ಸಮೀಪ ನಿವಾಸಿ ನ್ಯಾಯವಾದಿ ಕೆ. ಶ್ರೀಕಾಂತ್ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ಕಳೆದ ೧೪ರಂದು ಸಂಜೆ ಕಣ್ಣೂರು ಮೈದಾನದ ಸಮೀಪ ಆಯೋಜಿಸಿದ ಸಾರ್ವಜನಿಕ ಸಭೆಯಲ್ಲಿ ರಾಹುಲ್ ಗಾಂಧಿಯನ್ನು ಬೀದಿ ನಾಯಿಯಾಗಿ ಚಿತ್ರೀಕರಿಸಿ ಭಾಷಣ ಮಾಡಿರುವುದಾಗಿ ಆರೋಪಿಸಲಾಗಿದೆ. ಕಾಂಗ್ರೆಸ್‌ಗೆ ಅಪಕೀರ್ತಿ ಉಂಟುಮಾಡುವ, ಗಲಭೆ ಸೃಷ್ಟಿಸಲು ಯತ್ನಿಸಲಾಗಿದೆ ಎಂದು ಆರೋಪಿಸಿ ನ್ಯಾಯವಾದಿ ಶಾಸಕ ಟಿ.ಎ. ಮೋಹನನ್ ನೀಡಿದ ದೂರಿನಂತೆ ಕೇಸು ದಾಖಲಿಸಲಾಗಿದೆ.






