ಕಾನತ್ತೂರಿನಲ್ಲಿ ಶ್ರೀ ವಯನಾಟು ಕುಲವನ್ ದೈವಂಕಟ್ಟು ಮಹೋತ್ಸವ ಮಾರ್ಚ್ ೮ರಿಂದ
ಮುಳಿಯಾರು: ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ ಮಾರ್ಚ್ ೮ರಿಂದ ೧೨ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
೮ರಂದು ಬೆಳಿಗ್ಗೆ ಉಗ್ರಾಣ ತುಂಬಿ ಸುವ ಶೋಭಾಯಾತ್ರೆ ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನ ಪರಿಸರದಿಂದ ಆರಂಭಗೊಳ್ಳಲಿದೆ. ಸಂಜೆ ೬ ಗಂಟೆಗೆ ಬಂಡಾರ ಮೆರವಣಿಗೆ, ರಾತ್ರಿ ೮ರಿಂದ ದೈವಗಳ ಆರಂಭ, ೯ರಿಂದ ತಮ್ಮ ದೈವ, ಅಣ್ಣ ದೈವ, ಬಬ್ಬೇರಿಯನ್, ಮಾಣಿಚ್ಚಿ ದೈವಗಳು, ೯ರಂದು ಮುಂಜಾನೆ ೪ ಗಂಟೆಗೆ ಚಾಮುಂಡಿ ದೈವ, ೮ ಗಂಟೆಗೆ ಪಂಜುರ್ಲಿ, ರಾತ್ರಿ ೭ ಗಂಟೆಗೆ ರಕ್ತೇಶ್ವರಿ, ವಿಷ್ಣುಮೂರ್ತಿ ದೈವ ನರ್ತನ ನಡೆಯಲಿದೆ.ಮಾರ್ಚ್ ೧೦ರಂದು ಬೆಳಿಗ್ಗೆ ೧೦ ಗಂಟೆಗೆ ರಕ್ತೇಶ್ವರಿ ದೈವ, ಅಪರಾಹ್ನ ೨ ಗಂಟೆಗೆ ವಿಷ್ಣುಮೂರ್ತಿ ದೈವ, ಸಂಜೆ ೬ ಗಂಟೆಗೆ ಶ್ರೀ ವಯನಾಟುಕುಲವನ್ ದೈವ ಆರಂಭ, ೧೧ರಂದು ಸಂಜೆ ೬ ಗಂಟೆಯಿಂದ ಕೋರಚ್ಚನ್ ದೈವದ ವೆಳ್ಳಾಟ, ರಾತ್ರಿ ೯ ಗಂಟೆಗೆ ಕಂಡನಾರ್ ಕೇಳನ್ ದೈವದ ವೆಳ್ಳಾಟ, ೧೧ರಿಂದ ವಯನಾಟುಕುಲವನ್ ದೈವದ ವೆಳ್ಳಾಟ ಬಳಿಕ ವಿಷ್ಣುಮೂರ್ತಿ ದೈವ ನಡೆಯಲಿದೆ. ೧೨ರಂದು ಬೆಳಿಗ್ಗೆ ೯ ಗಂಟೆಗೆ ಕೋರಚ್ಚನ್ ದೈವ, ಬಳಿಕ ಕಂಡನಾರ್ ಕೇಳನ್ ದೈವ, ಶ್ರೀ ವಯ ನಾಟುಕುಲವನ್ ದೈವ, ಅಪರಾಹ್ನ ೨ ಗಂಟೆಗೆ ಸೂಟೆ ಹೊತ್ತಿಸುವುದು, ಸಂಜೆ ೪ ಗಂಟೆಗೆ ವಿಷ್ಣುಮೂರ್ತಿ ದೈವ ಶ್ರೀ ಮಹಾಲಿಂಗೇಶ್ವರ ಕ್ಷೇತ್ರ, ನಾಲ್ವರ್ ದೈವಸ್ಥಾನಕ್ಕೆ ಹೊರಡುವುದು ನಡೆಯಲಿದೆ