ತ್ಯಾಜ್ಯ ರಾಶಿ ಹಾಕಿ ಕಿಚ್ಚಿಟ್ಟ ಪರಿಣಾಮ ನೆರಳು ಮರ ಉರಿದು ನಾಶ

ಬೋವಿಕ್ಕಾನ:  ತ್ಯಾಜ್ಯವನ್ನು ರಾಶಿ ಹಾಕಿ ಕಿಚ್ಚಿಟ್ಟ ಪರಿಣಾಮ ಮರವೊಂದು ಉರಿದು ನಾಶಗೊಂಡ ಘಟನೆ ನಡೆದಿದೆ. ಬೋವಿಕ್ಕಾನ ಪೇಟೆಯಲ್ಲಿ ಚೆರ್ಕಳ-ಜಾಲ್ಸೂರು ಅಂತಾರಾಜ್ಯ ರಸ್ತೆ ಬದಿ ಹಲವು ವರ್ಷಗಳ ಹಳಮೆಯ ನೆರಳು ಮರ ನಿನ್ನೆ ರಾತ್ರಿ ವೇಳೆ ಉರಿದು ನಾಶಗೊಂಡಿದೆ.

ರಸ್ತೆ ಬದಿಯಲ್ಲಿದ್ದ ಮರದ   ಬುಡದಲ್ಲಿ  ಪ್ಲಾಸ್ಟಿಕ್ ಸಹಿತ ತ್ಯಾಜ್ಯ ವನ್ನು ರಾಶಿ ಹಾಕಿ ಕಿಚ್ಚಿಡಲಾಗಿದೆ.  ಇದರಿಂದ ಮೊದಲಿಗೆ ಮರದ ಒಣಗಿದ ರೆಂಬೆಗಳಿಗೆ ಬೆಂಕಿ ಹತ್ತ್ತಿಕೊಂಡಿದೆ.  ಬಳಿಕ ಅದು ಇಡೀ ಮರಕ್ಕೆ ಹರಡಿದೆ. ಈ ಬಗ್ಗೆ ನಾಗರಿಕರು ನೀಡಿದ ಮಾಹಿತಿಯಂತೆ ಕಾಸರಗೋಡಿನಿಂದ ಅಗ್ನಿಶಾಮಕದಳ ತಲುಪಿ ಬೆಂಕಿ ನಂದಿಸಿದೆ. ಆದರೆ ಅಷ್ಟರೊಳಗೆ ಮರ ಪೂರ್ಣವಾಗಿ ಉರಿದಿದ್ದು, ಇನ್ನು ಯಾವುದೇ ಕ್ಷಣ ಧರೆಗಪ್ಪಳಿಸುವ ಸ್ಥಿತಿಯಲ್ಲಿದೆ.

ಹತ್ತುವರ್ಷಗಳ ಹಿಂದೆ  ಈ ಮರವನ್ನು ಕಡಿದು ತೆಗೆಯುವುದರ ವಿರುದ್ಧ ಪುಂಜಿರಿಕ್ಲಬ್ ನೀಡಿದ ಅರ್ಜಿಯಲ್ಲಿ ಹೈಕೋರ್ಟ್ ರದ್ದು ಆದೇಶ ನೀಡಿತ್ತು. ಆ ಮರವನ್ನು ಇದೀಗ ಕಿಚ್ಚಿಟ್ಟು ನಾಶಗೊಳಿಸಲಾಗಿದೆ. ಕೆಲವು ದಿನಗಳ ಹಿಂದ ಬೋವಿಕ್ಕಾನ ಪೇಟೆಯಲ್ಲೇ ಮತ್ತೊಂದು ಮರದ   ಬುಡದಲ್ಲಿ  ತ್ಯಾಜ್ಯ ರಾಶಿ ಹಾಕಿ ಕಿಚ್ಚಿಟ್ಟು ನಾಶಗೊಳಿಸಲು ಪ್ರಯತ್ನ ನಡೆದಿತ್ತು. ಈ ಘಟನೆ ಗಮನಕ್ಕೆ ಬಂದ ಸಮೀಪದ ವ್ಯಾಪಾರಿಗಳು ಕೂಡಲೇ ಬೆಂಕಿಯನ್ನು ನಂದಿಸಿದ್ದರು.

You cannot copy contents of this page