ಬಾವಿಕೆರೆ ಅಣೆಕಟ್ಟು ಟೂರಿಸಂ ಯೋಜನೆಗೆ ಮಾರ್ಚ್‌ನಲ್ಲಿ ಚಾಲನೆ

ಬೋವಿಕ್ಕಾನ:  ಬಾವಿಕೆರೆ ಅಣೆಕಟ್ಟು ಪ್ರವಾಸೋಧ್ಯಮ ಯೋಜನೆಯನ್ನು ಮುಂದಿನ ತಿಂಗಳು ಆರಂಭಿಸಲಾಗುವುದೆಂದು ಶಾಸಕ ಸಿ.ಎಚ್. ಕುಂಞಂಬು ತಿಳಿಸಿದ್ದಾರೆ. ಬಾವಿಕೆರೆ ಕುಡಿಯುವ ನೀರು ಯೋಜನೆಯ ಡ್ಯಾಮ್ ಸ್ವೆಟ್‌ಗೆ ಸಂಬಂಧಿಸಿದ ಸ್ಥಳ ಟೂರಿಸಂ ಪ್ರೊಜೆಕ್ಟ್‌ಗೆ ಸೂಕ್ತವಾದ ಸ್ಥಳವೆಂದು ಪತ್ತೆ ಮಾಡಿ ರಾಜ್ಯ ಮುಂಗಡಪತ್ರದಲ್ಲಿ ೫ ಕೋಟಿ ರೂ. ಮಂಜೂರು ಮಾಡಲಾಗಿತ್ತು. ಈ ಯೋಜನೆಯ ಟೆಂಡರನ್ನು ತಿರುವನಂ ತಪುರ ಕೇಂದ್ರವಾಗಿ ಕಾರ್ಯಾಚರಿಸುವ ಹಾಬಿಟಾಟ್ ಟೆಕ್ನಾಲಜಿ ಗ್ರೂಪ್ ವಹಿಸಿಕೊಂಡಿದೆ. ಮುಂದಿನ ತಿಂಗಳು ಪ್ರಥಮ ವಾರ ದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗು ವುದು. ಬಳಿಕ ಕಾಮಗಾರಿ ಆರಂಭ ಗೊಳ್ಳಲಿದೆ.ಎರಡು ಹಂತ ಗಳಲ್ಲಾಗಿ ನಡೆಯುವ ಯೋಜನೆಯ ಮೊದಲ ಹಂತವಾಗಿ ಪ್ರವಾಸಿಗರಿಗೆ ಅತ್ಯಗತ್ಯವಾದ ಸೌಕರ್ಯಗಳು, ದ್ವಿತೀಯ ಹಂತದಲ್ಲಿ ಸೇತುವೆ ಸಹಿತದ ಸೌಕರ್ಯಗಳನ್ನು ಸಿದ್ಧಪಡಿಸಲಾಗುವುದು ಎಂದು ಶಾಸಕರು ತಿಳಿಸಿದ್ದಾರೆ.

RELATED NEWS

You cannot copy contents of this page