ಬಿಜೆಪಿ ಅಧಿಕಾರಕ್ಕೇರುವುದನ್ನು ತಡೆಯುವುದೇ ಸಿಪಿಎಂನ ಪ್ರಧಾನ ಉದ್ದೇಶ

ತಿರುವನಂತಪುರ: ಕೇಂದ್ರದಲ್ಲಿ  ಬಿಜೆಪಿ ನೇತೃತ್ವದ ಸರಕಾರ ಮತ್ತೆ ಅಧಿಕಾರಕ್ಕೇರುವುದನ್ನು ತಡೆಯುವುದೇ ಎಡರಂಗದ ಪ್ರಧಾನ ಚುನಾವಣಾ ಉದ್ದೇಶವಾಗಿದೆಯೆಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಹೇಳಿದ್ದಾರೆ.

ಕೇಂದ್ರದಲ್ಲಿ ಬಿಜೆಪಿ ಮತ್ತೆ ಗೆದ್ದು ಅಧಿಕಾರಕ್ಕೇರುವದನ್ನು ತಡೆಯು ವುದಕ್ಕೆ  ಸಿಪಿಎಂ ಅಗ್ರ ಪ್ರಾಶಸ್ತ್ಯ ನೀಡಲಿದೆ. ದೇಶದ ಹೆಚ್ಚಿನ ಎಲ್ಲಾ  ರಾಜ್ಯಗಳಲ್ಲಿ ಬಿಜೆಪಿ ವಿರುದ್ಧ ಈಗಾ ಗಲೇ ಹಲವು ರಾಜಕೀಯ ಪಕ್ಷಗಳು ಒಂದಾಗಿ ಹೊಸ ಒಕ್ಕೂಟಗಳಿಗೆ ರೂಪು ನೀಡಿವೆ.

ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಡ್ ರಾಜ್ಯಗಳಿಗೆ ಇತ್ತೀಚೆಗೆ ನಡೆದ  ಚುನಾವಣೆಯಲ್ಲಿ  ಬಿಜೆಪಿ ಗೆದ್ದುಕೊಂಡಿದೆಯಾದರೂ ಆ ರಾಜ್ಯಗಳಲ್ಲಿ   ಬಿಜೆಪಿಗೆ  ಕನಿಷ್ಠ ಶೇ. ೫೦ರಷ್ಟು ಮತಗಳನ್ನಾದರೂ ಗಳಿಸಲು ಸಾಧ್ಯವಾಗಿಲ್ಲ. ಸಂವಿಧಾನ, ಪ್ರಜಾ ತಂತ್ರ ಮತ್ತು ಫೆಡರಲಿಸಂನ ಮೇಲೆ ಬಿಜೆಪಿ ಸವಾಲೆಸೆಯುತ್ತಿದೆ. ಸಿಪಿಎಂ ತಳೆದ ನಿಲುವೇ  ಅಯೋಧ್ಯೆಯ ಶ್ರೀರಾಮ ಕ್ಷೇತ್ರದ ಉದ್ಘಾಟನಾ ಸಮಾರಂಭದಲ್ಲಿ  ಕಾಂಗ್ರೆಸ್ ನೇತಾ ರರು ಭಾಗವಹಿಸಲು ತಯಾರಾಗದೇ ಇರುವುದರ ಪ್ರಧಾನ ಹಿನ್ನೆಲೆಯಾಗಿ ದೆಯೆಂದು ಅವರು ಹೇಳಿದ್ದಾರೆ.

RELATED NEWS

You cannot copy contents of this page