ಜಿಲ್ಲೆಯಲ್ಲಿ ನಿನ್ನೆ 91,335 ಮಕ್ಕಳಿಗೆ ಪೋಲಿಯೋ ಬಿಂದು ಔಷಧಿ ವಿತರಣೆ
ಕಾಸರಗೋಡು: ಜಿಲ್ಲೆಯಲ್ಲಿ ನಿನ್ನೆ 1173 ಬೂತ್‌ಗಳಲ್ಲಾಗಿ 91335 ಮಕ್ಕಳಿಗೆ ಪೋಲಿಯೋ ಬಿಂದು ಔಷಧಿ ನೀಡಲಾಗಿದೆ. ಪಲ್ಸ್ ಪೋಲಿಯೋ ಇಮ್ಯುನೈಸೇ ಶನ್‌ನಂಗವಾಗಿ ನಡೆದ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಕಾಲಿಕಡವ್‌ನಲ್ಲಿ ಶಾಸಕ ಎಂ. ರಾಜಗೋಪಾಲ್ ಉದ್ಘಾಟಿಸಿದರು. ಪಿಲಿಕೋಡ್ ಪಂಚಾಯತ್ ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ವಿ.ವಿ. ಸುಲೋಚನ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ವೈದ್ಯಾಧಿಕಾರಿ ಡಾ| ಎ.ವಿ. ರಾಮ ದಾಸ್ ಪ್ರಧಾನ ಭಾಷಣ ಮಾಡಿದರು.
ನಿನ್ನೆ ಪೋಲಿಯೋ ಬಿಂದು ಔಷ ಧಿ ಸ್ವೀಕರಿಸದ ಮಕ್ಕಳಿಗೆ ಆರೋಗ್ಯ ಕಾರ್ಯಕರ್ತರ ನೇತೃತ್ವದಲ್ಲಿ ಇಂದು, ನಾಳೆ ಮನೆಗೆ ತೆರಳಿ ಬಿಂದು ಔಷಧಿ ವಿತರಿಸಲಾಗುವುದೆಂದು ಜಿಲ್ಲಾ ವೈದ್ಯಾ ಧಿಕಾರಿ ಡಾ| ಎ.ವಿ. ರಾಮದಾಸ್ ತಿಳಿಸಿದ್ದಾರೆ.