ಕನ್ನಡಬಲ್ಲ ಫಿಸಿಕಲ್ ಎಜುಕೇಶನ್ ಟೀಚರ್‌ರನ್ನು ನೇಮಿಸುವಂತೆ ಮನವಿ

ಕಾಸರಗೋಡು: ಕಾಸರಗೋಡು ಮತ್ತು ಮಂಜೇಶ್ವರ ತಾಲೂಕನ್ನು ಕನ್ನಡ ಭಾಷಾ ಪ್ರದೇಶವೆಂದು ಕೇರಳ ಸರಕಾರ ಘೋಷಿಸಿ ಕನ್ನಡಿಗರ ಹಿತರಕ್ಷಣೆಗಾಗಿ ಅನೇಕ ಆಜ್ಞೆ, ಆದೇಶಗಳನ್ನು  ಹೊರಡಿಸಿದೆ. ಕಾಸರಗೋಡು ಮತ್ತು ಮಂಜೇಶ್ವರ ತಾಲೂಕಿನಲ್ಲಿ ಅನೇಕ ಕನ್ನಡ ಮಾಧ್ಯಮ ಹೈಸ್ಕೂಲ್‌ಗಳಾದ ಪೈವಳಿಕೆ ನಗರ,  ಬೇಕೂರು, ಮಂಗಲ್ಪಾಡಿ, ಬಂಗ್ರಮಂಜೇಶ್ವರ ಮುಂತಾದ ಕಡೆಗಳಲ್ಲಿ ಕನ್ನಡ ಬಲ್ಲ ಫಿಸಿಕಲ್ ಎಜುಕೇಶನ್ ಟೀಚರ್ ಹುದ್ದೆಗಳಿವೆ. ಈ ಹುದ್ದೆಗಳಿಗೆ ಪಿಎಸ್‌ಸಿ ಮುಖಾಂತರ ಆಯ್ಕೆ ಮಾಡಬೇಕಾಗಿದೆ. ಸುಮಾರು ೨೦ ವರ್ಷಗಳಿಂದ ಕನ್ನಡ ಬಲ್ಲ ಫಿಸಿಕಲ್ ಎಜ್ಯುಕೇಶನ್ ಟೀಚರ್ ನೇಮಕಾತಿ ನಡೆದಿರುವುದಿಲ್ಲ. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕನ್ನಡ ತಿಳಿಯದವರು ನೇಮಕವಾಗುತ್ತಿದ್ದಾರೆ. ಕನ್ನಡದಲ್ಲಿ  ಪಠ್ಯಪುಸ್ತಕಗಳಿವೆ. ಆದರೆ ಕನ್ನಡ ವಿದ್ಯಾರ್ಥಿಗಳಿಗೆ ಆ ಪಠ್ಯ ಭಾಗವನ್ನು ಪಾಠಮಾಡಲು ಕನ್ನಡಬಲ್ಲ ಫಿಸಿಕಲ್ ಎಜುಕೇಶನ್ ಟೀಚರ್‌ರ ನೇಮಕಾತಿ ಪಿಎಸ್‌ಸಿ ಮೂಲಕ ಆಗಬೇಕಾಗಿದೆ. ಜಿಲ್ಲಾ ವಿದ್ಯಾರಂಗ ಉಪನಿರ್ದೇಶಕರು ಅದಕ್ಕಾಗಿ ಪಿಎಸ್‌ಸಿಗೆ ವರದಿ ಮಾಡಬೇಕಾಗಿದೆ. ಆ ಬಗ್ಗೆ ಇಲ್ಲಿನ ಕನ್ನಡ ಬಲ್ಲ ಫಿಸಿಕಲ್ ಎಜುಕೇಶನ್ ಟೀಚರ್ ಟ್ರೈನಿಂಗ್ ಸಂಘಟನೆ ಅಧ್ಯಕ್ಷ ಜಯರಾಜ್ ಎ ಕಿಳಿಂಗಾರು ರಾಜ್ಯದ ಶಿಕ್ಷಣ ಸಚಿವರಿಗೆ, ಶಿಕ್ಷಣ ನಿರ್ದೇಶಕರಿಗೆ, ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರಿಗೆ ಹಾಗೂ ಶಾಸಕರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page