ಮಾನ್ಯ: ಕಲ್ಲಕಟ್ಟ ಕೆ.ಜಿ. ಭಟ್ ಮೆಮೋರಿಯಲ್ ವಾಚನಾಲಯ ಮತ್ತು ಗ್ರಂಥಾಲಯದ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಕಲ್ಲಕಟ್ಟ ಎಂ.ಎ.ಯು.ಪಿ. ಶಾಲೆಯಲ್ಲಿ ನಡೆಸಲಾಯಿತು. ಶಾಂತಾ ಕುಮಾರಿ ಟೀಚರ್ ಮಹಿಳಾ ದಿನಾಚರಣೆ ಬಗ್ಗೆ ಮಾತನಾಡಿದರು. ಮಹಿಳಾವೇದಿ ಅಧ್ಯಕ್ಷೆ ಮಂಜು ಅಧ್ಯಕ್ಷತೆ ವಹಿಸಿದರು. ಮಹಿಳಾವೇದಿ ಕಾರ್ಯದರ್ಶಿ ಪಾರ್ವತಿ, ಲೈಬ್ರೇರಿಯನ್ ಶಾಲಿನಿ ರೋಡ್ರಿಗಸ್ ಉಪಸ್ಥಿತರಿದ್ದರು.
