ಕೋಳಿಕ್ಕಾಲು ಶ್ರೀ ಗೋಪಾಲಕೃಷ್ಣ ಕ್ಷೇತ್ರ ವಾರ್ಷಿಕ ಮಹೋತ್ಸವ, ಜೀರ್ಣೋದ್ಧಾರ ನಿಧಿ ಸಂಗ್ರಹ 11 ರಂದು
ಮುಳ್ಳೇರಿಯ: ಕೋಳಿಕ್ಕಾಲು ಶ್ರೀ ಗೋಪಾಲಕೃಷ್ಣ ಕ್ಷೇತ್ರದ ವಾರ್ಷಿಕ ಮಹೋತ್ಸವ ಈ ತಿಂಗಳ 11ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಜೀರ್ಣೋದ್ಧಾರ ನಿಧಿ ಸಂಗ್ರಹಣೆ ಹಾಗೂ ಲಕ್ಕಿಕೂಪನ್ ಬಿಡುಗಡೆ ನಡೆಯಲಿದೆ. ಅಂದು ಬೆಳಿಗ್ಗೆ ೭ ಗಂಟೆಗೆ ಗಣಪತಿ ಹೋಮ, ನವಕಾಭಿಷೇಕ, ೭.೩೦ರಿಂದ ಆರ್ಟ್ ಆಫ್ ಲಿವಿಂಗ್ ಮುಳ್ಳೇರಿಯ ಇವರಿಂದ ಭಜನೆ, 10 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ರವೀಶ ತಂತ್ರಿ ಕುಂಟಾರು ಅಧ್ಯಕ್ಷತೆ ವಹಿಸುವರು. ಉದ್ಯಮಿ ವಸಂತ ಪೈ ಬದಿಯಡ್ಕ ಉದ್ಘಾಟಿಸುವರು. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ನಿಧಿ ಸಮರ್ಪಣಾ ಕಾರ್ಯಕ್ಕೆ ಚಾಲನೆ ನೀಡಿ ಲಕ್ಕಿಕೂಪನ್ ಬಿಡುಗಡೆಗೊಳಿಸುವರು.
ಭಾಸ್ಕರ ಮಣಿಯಾಣಿ ಕೋಳಿಕ್ಕಾಲು, ಎಂ. ಸಂಜೀವ ಶೆಟ್ಟಿ ಮೊಟ್ಟೆಕುಂಜ, ಗಣೇಶ್ ವತ್ಸ ಮುಳ್ಳೇರಿಯ, ಶಂಕರನಾರಾಯಣ ಮಯ್ಯ ಬದಿಯಡ್ಕ, ಎ.ಜಿ. ಗಣೇಶ್ ಶೆಟ್ಟಿ ಆದೂರುಗುತ್ತು, ಮುಖೇಶ್, ಎ.ಬಿ. ಗಂಗಾಧರ ಬಲ್ಲಾಳ್, ವಿನೋದ್ ಬೇಂಗತ್ತಡ್ಕ ಕೇಶವ ಕೆ. ಕೋಳಿಕ್ಕಾಲು, ದೇವಾನಂದ ಶೆಟ್ಟಿ ಕಾನಕ್ಕೋಡು ಉಪಸ್ಥಿತರಿರುವರು.11.30ಕ್ಕೆ ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ, ಸಂಜೆ ೬ರಿಂದ ಚೆಂಡೆ ಮೇಳ, ರಾತ್ರಿ ೭.೩೦ಕ್ಕೆ ರಂಗಪೂಜೆ, ೮ರಿಂದ ಅನ್ನ ಸಂತರ್ಪಣೆ, ೮.೩೦ಕ್ಕೆ ಶ್ರೀ ಭೂತಬಲಿ, ಬೆಡಿ ಸೇವೆ, ದರ್ಶನ ಬಲಿ ನಡೆಯಲಿದೆ. ೧೨ರಂದು ಬೆಳಿಗ್ಗೆ ೧೧ ಗಂಟೆಗೆ ಶ್ರೀ ಧೂಮಾವತಿ ದೈವಕ್ಕೆ ತಂಬಿಲ, ಮಧ್ಯಾಹ್ನ ಮಹಾಪೂಜೆ ನಡೆಯಲಿದೆ.