ವಿವಿಧ ಕಡೆಗಳಲ್ಲಿ ಅಗ್ನಿ ದುರಂತ
ಉಪ್ಪಳ: ವಿವಿಧ ಕಡೆಗಳಲ್ಲಿ ಅಗ್ನಿದುರಂತ ಸಂಭವಿಸಿದ್ದು, ಉಪ್ಪಳ ಅಗ್ನಿ ಶಾಮಕ ದಳ ನಡೆಸಿದ ಕಾರ್ಯಾಚರಣೆಯಿಂದ ಉಂಟಾಗ ಬಹುದಾದ ದುರಂತ ತಪ್ಪಿದೆ. ನಿನ್ನೆ ಮಧ್ಯಾಹ್ನ ಮಜೀರ್ಪಳ್ಳದಲ್ಲಿ ಅಬ್ಬಾಸ್ ಎಂಬವರ ಹಿತ್ತಿಲಿಗೆ ಬೆಂಕಿ ತಗಲಿದೆ. ತೆಂಗಿನ ಮರಗಳು ಉರಿದಿದೆ. ಬೇಕೂರಿನಲ್ಲಿ ವ್ಯಕ್ತಿ ಹುಲ್ಲು ತುಂಬಿದ ಹಿತ್ತಿಲು ಹಾಗೂ ರಾತ್ರಿ ಕಡಂಬಾರಿನಲ್ಲಿ ಏರ್ವರ ಹಿತ್ತಿಲಿಗೆ ಬೆಂಕಿ ತಗಲಿದೆ. ಅಗ್ನಿಶಾಮಕ ದಳ ತಲುಪಿ ಬೆಂಕಿ ನಂದಿಸಿದೆ.