ಬಿಜೆಪಿ ಅಭ್ಯರ್ಥಿಯಿಂದ ವಿವಿಧೆಡೆ ಭೇಟಿ

ಉಪ್ಪಳ: ಲೋಕಸಭಾ ಚುನಾವಣೆಯಲ್ಲಿ ಕಾಸರಗೋಡು ಕ್ಷೇತ್ರದಿಂದ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿ ಎಂ.ಎಲ್. ಅಶ್ವಿನಿ ತೀವ್ರ ಪ್ರಚಾರ ನಡೆಸುತ್ತಿದ್ದಾರೆ. ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಪೈವಳಿಕೆ, ಕುಂಬಳೆ ಕಾಲೇಜು, ಪೆರ್ಣೆ ಶ್ರೀ ಮುಚ್ಚಿಲೋಟ್ ಕ್ಷೇತ್ರದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಭೇಟಿ ಸಹಿತ ಹಲವು ಕ್ಷೇತ್ರ ಸಮಾರಂಭಗಳಿಗೆ ಬಿಜೆಪಿ ಅಭ್ಯರ್ಥಿ ತೆರಳಿ ಮತ ಯಾಚಿಸಿದರು. ಈ ವೇಳೆ ಬಿಜೆಪಿ ಮಂಡಲ ಅಧ್ಯಕ್ಷ ಆದರ್ಶಿ ಬಿ.ಎಂ, ಕುಂಬಳೆ ಮಂಡಲ ಅಧ್ಯಕ್ಷ ಸುನಿಲ್ ಅನಂತಪುರ, ಮುಖಂಡರಾದ ಕೋಳಾರು ಸತೀಶ್ಚಂದ್ರ ಭಂಡಾರಿ, ವಿ. ರವೀಂದ್ರನ್, ಚಂದ್ರಾವತಿ ಶೆಟ್ಟಿ, ಸದಾಶಿವ ಚೇರಾಲು ಜೊತೆಗಿದ್ದರು.

ಆಧಾರ್ ನವೀಕರಣೆ: ಉಚಿತ ಸೇವೆ ೩ ತಿಂಗಳು ಮುಂದೂಡಿಕೆ

ಕೊಚ್ಚಿ: ಆಧಾರ್‌ಕಾರ್ಡ್‌ನಲ್ಲಿ ವಿಳಾಸ ದಾಖಲೆಗಳಲ್ಲಿ ಬದಲಾವಣೆ ಇದ್ದರೆ ಉಚಿತವಾಗಿ ನವೀಕರಿಸ ಲಿರುವ ಅಕಾಶವನ್ನು ಯೂನಿಕ್ ಐಡೆಂಟಿಫಿಕೇಶನ್ ಅಥೋರಿಟಿ ಆಫ್ ಇಂಡಿಯಾ ೩ ತಿಂಗಳಿಗೆ ಮುಂದೂಡಿದೆ. ಜೂನ್ ೧೪ರವರೆಗೆ ದಾಖಲೆಗಳನ್ನು ಮೈ ಆಧಾರ್ ಪೋರ್ಟಲ್‌ನಲ್ಲಿ ಉಚಿತವಾಗಿ ನವೀಕರಿಸಬಹುದು. ೧೦ ವರ್ಷ ಕಳೆದ ಆಧಾರ್ ಕಾರ್ಡ್‌ಗಳ ಕಡ್ಡಾಯ ನವೀಕರಣೆ ಕೂಡಾ ಉಚಿತವಾಗಿರಲಿದೆ.

ಅಕ್ಷಯ ಕೇಂದ್ರಗಳಿಗೆ ತಲುಪಿ ೫೦ ರೂ. ಶುಲ್ಕ ನೀಡಿಯೂ ಆಧಾರ್ ನವೀಕರಿಸಬಹುದು.  ೫ ವರ್ಷ ಪೂರ್ತಿಗೊಂಡವರು. ೧೫ ವರ್ಷ ದಾಟಿದವರ ಬಯೋಮೆಟ್ರಿಕ್ ದಾಖಲೆಗಳು, ಭಾವಚಿತ್ರವನ್ನು ಕಡ್ಡಾಯವಾಗಿ ನವೀಕರಿಸಬೇಕು.

You cannot copy contents of this page