ಶಬರಿ ಕೆ-ಅಕ್ಕಿ ವಿತರಣೆ ಆರಂಭ
ಕಾಸರಗೋಡು: ಕಿಲೋ ಒಂದಕ್ಕೆ ೨೯ ರೂ. ದರದಲ್ಲಿ ಶಬರಿ ಕೆ. ಅಕ್ಕಿ ವಿತರಣೆ ರಾಜ್ಯದಲ್ಲಿ ನಿನ್ನೆಯಿಂದ ಜ್ಯಾರಿಗೊಂಡಿದೆ. ಇದು ಕೇರಳ ಸರಕಾರದ ಸ್ವಂತ ಯೋಜನೆಯಾಗಿದೆ.
ಕಿಲೋ ಒಂದಕ್ಕೆ ೪೦ ರೂ. ಬೆಲೆ ನೀಡಿ ಖರೀದಿಸುವ ಅಕ್ಕಿಯನ್ನು ೧೧ ರೂ. ನಷ್ಟ ಸಹಿಸಿ ಅದನ್ನು ೨೯ ರೂ.ಗೆ ವಿತರಿಸಲಾಗು ತ್ತಿದೆ. ಆದರೆ ಕೇಂದ್ರ ಸರಕಾರ ೧೮.೫೯ ರೂ.ಗೆ ಲಭಿಸುವ ಅಕ್ಕಿ ಯನ್ನು ಕಿಲೋಕ್ಕೆ ೨೯ ರೂ.ಗೆ ಮಾರಾಟ ಮಾಡುತ್ತಿದೆ. ಇದರಿಂದ ಕೇಂದ್ರ ಸರಕಾರಕ್ಕೆ ಕಿಲೋ ಒಂದಕ್ಕೆ ತಲಾ ೧೦.೪೧ ರೂ.ನಷ್ಟು ಲಾಭ ಉಂಟಾಗುತ್ತದೆ. ಆದರೆ ಕೇರಳ ಸರಕಾರದ ಕೆ- ಅಕ್ಕಿ ಯೋಜನೆಯಂತೆ ರಾಜ್ಯ ಸರಕಾರ ಕಿಲೋ ಒಂದಕ್ಕೆ ೧೧ ರೂ.ಗಳ ನಷ್ಟದಲ್ಲಿ ವಿತರಿಸುತ್ತಿದೆ. ಇದರಲ್ಲಿ ರಾಜಕೀಯ ಲಾಭ ಗಿಟ್ಟಿಸುವ ಉದ್ದೇಶವಿಲ್ಲವೆಂದೂ ಮುಖ್ಯಮಂತ್ರಿ ಹೇಳಿದ್ದಾರೆ.
ಇದರಂತೆ ಮಟ್ಟಾ ಅಕ್ಕಿಯನ್ನು ಕಿಲೋ ಒಂದಕ್ಕೆ ೨೯ ರೂ. ಮತ್ತು ಕುರುವಾ ಅಕ್ಕಿಯನ್ನು ಕಿಲೋ ಒಂದಕ್ಕೆ ೩೦ ರೂ. ದರದಲ್ಲಿ ವಿತರಿಸಲಾಗುತ್ತಿದೆ. ಇದು ಕೇರಳ ಬ್ರಾಂಡ್ ಅಕ್ಕಿಯಾಗಿದೆ ಎಂದೂ ಮುಖ್ಯಮಂತ್ರಿ ಹೇಳಿದ್ದಾರೆ.