ವರ್ಕಾಡಿ: ಚುನಾವಣೆ ಪೂರ್ವಭಾವಿ ಯುಡಿಎಫ್ ಸಭೆ
ಮಂಜೇಶ್ವರ: ಲೋಕಸಭಾ ಚುನಾವಣೆಯಲ್ಲಿ ಕಾಸರಗೋಡು ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಯುಡಿಎಫ್ ಅಭ್ಯರ್ಥಿ ರಾಜ್ ಮೋಹನ್ ಉಣ್ಣಿತ್ತಾನ್ ರ ಚುನಾವಣಾ ವಿಜಯಕ್ಕಾಗಿ ವರ್ಕಾಡಿ ಪಂಚಾಯತ್ ಯುಡಿಎಫ್ ಚುನಾವಣಾ ಸಮÁವೇಶ ನಿನ್ನೆ ನಡೆಯಿತು. ಗಾಂಧಿನಗರ ಎ.ಎಚ್.ಪ್ಯಾಲೇಸ್ ನಲ್ಲಿ ನಡೆದ ಸಮÁವೇಶವನ್ನು ಯುಡಿಎಫ್ ಮಂಜೇಶ್ವರ ಮಂಡಲ ಚೆಯರ್ ಮ್ಯಾನ್ ಅಬ್ದುಲ್ ಅಜೀಜ್ ಮರಿಕೆ ಉದ್ಘಾಟಿಸಿದರು. ಶಾಸಕ ಎಕೆಎಂ ಅಶ್ರಫ್ ಮÁತನಾಡಿದರು. ಯುಡಿಎಫ್ ಚೆಯರ್ ಮ್ಯಾನ್ ಮುಹಮ್ಮದ್ ಮಜಾಲ್ ಅಧ್ಯಕ್ಷತೆ ವಹಿಸಿದ್ದರು. ಸಭೆ ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಡಿಎಂಕೆ, ನೇತಾರರಾದ ಅಬ್ದುಲ್ ಮಜೀದ್,ಉಮ್ಮರ್ ಬೋರ್ಕಳ, ಇಬ್ರಾಹಿಂ ಧರ್ಮನಗರ, ಕಮಲಾಕ್ಷಿ, ಸೀತಾ ಉಪಸ್ಥಿತರಿದ್ದರು. ಪಿ.ಬಿ. ಅಬೂಬಕ್ಕರ್ ಪಾತೂರು ಚೆಯರ್ ಮ್ಯಾನ್, ಕೆ.ಮುಹಮ್ಮದ್ ವರ್ಕಿಂಗ್ ಚೆಯರ್ ಮ್ಯಾನ್, ಮುಹಮ್ಮದ್ ಮಜಾಲ್ ಕನ್ವೀನರ್ ಆಗಿ ಆಯ್ಕೆಯಾದರು.