ಆಟಿಕುಕ್ಕೆ ಬ್ರಹ್ಮಕಲಶ, ಶತಚಂಡಿಕಾ ಯಾಗ ಸಿದ್ಧತಾ ಸಭೆ

ಕುಂಬಳೆ: ಬಾಯಾರು ಆಟಿಕುಕ್ಕೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ಶತಚಂಡಿಕಾಯಾಗ ಎಪ್ರಿಲ್ ೨೬, ೨೭, ೨೮ರಂದು ನಡೆಯಲಿದೆ. ಜಗದ್ಗುರು ಶ್ರೀ ವಿದುಶೇಖರ ಭಾರತಿ ಸ್ವಾಮೀಜಿ ಆಗಮಿಸುವರು.

ಆ ಪ್ರಯುಕ್ತ ರವೀಶ್ ಆಟಿಕುಕ್ಕೆಯವರ ಮನೆಯಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ವಿವಿಧ ಸಮಿತಿಗಳನ್ನು ರೂಪೀಕರಿಸಲಾಯಿತು. ಹರೀಶ್ ಭಟ್ ಆಟಿಕುಕ್ಕೆ ಪ್ರಾಸ್ತಾವಿಕ, ಡಾ. ಪ್ರದೀಪ್ ಆಟಿಕುಕ್ಕೆ ದಿಕ್ಸೂಚಿ ಭಾಷಣ ಮಾಡಿದರು. ವಿಶ್ವೇಶ್ವರ ಕೆದುಕೋಡಿ, ಶ್ರೀಕಾಂತ್ ವಾಟೆತ್ತಿಲ ಉಪಸ್ಥಿತರಿದ್ದರು. ಜಯಲಕ್ಷ್ಮಿ ಭಟ್, ಗೀತಾ ಗುಂಪೆ, ಶಂಕರ ಭಟ್ ಉಳುವಾನ, ಎಸ್.ವಿ. ಭಟ್ ವಾಟೆತ್ತಿಲ, ಕೃಷ್ಣ ಭಟ್ ಸಜಂಕಿಲ, ಲಕ್ಷ್ಮೀ ನಾರಾಯಣ ಭಟ್ ಆವಳ ಮಠ ಭಾಗವಹಿಸಿದರು. ಅಂಕಿತಾ ಆಟಿಕುಕ್ಕೆ ಪ್ರಾರ್ಥನೆ ಹಾಡಿದರು. ರಾಧಾಮಾಧವ ಆಟಿಕುಕ್ಕೆ ನಿರೂಪಿಸಿದರು. ವಿಶ್ವೇಶ್ವರ ಕೆದುಕೋಡಿ ವಂದಿಸಿದರು.

You cannot copy contents of this page