ರಸ್ತೆ ಬದಿಯಲ್ಲಿ ಜೀರ್ಣಾವಸ್ಥೆಯಲ್ಲಿರುವ ಮರದ ವಿದ್ಯುತ್ ಕಂಬದಿಂದ ಭೀತಿ
ಉಪ್ಪಳ: ಹಳೆಯ ಕಾಲದ ಮರದ ವಿದ್ಯುತ್ ಕಂಬ ಕನ್ನಟಿಪಾರೆ ಕುಂಡಚ್ಚಕಟ್ಟೆಯಲ್ಲಿ ರಸ್ತೆ ಬದಿ ಎರಡು ಉಳಿದಿದ್ದು, ಜೀರ್ಣಾವಸ್ಥೆಯಲ್ಲಿದೆ. ಇದರಿಂದ ಸ್ಥಳೀಯರಿಗೆ ಭೀತಿ ಉಂಟಾಗಿದೆ. ಹಲವಾರು ವಿದ್ಯುತ್ ತಂತಿಗಳು ಹಾದು ಹೋಗುವ ಈ ವಿದ್ಯುತ್ ಕಂಬದ ಸ್ಟೇ ವಯರ್ ತುಂಡಾಗಿದೆ. ಕಂಬವು ಶಿಥಿಲಾವಸ್ಥೆಯಲ್ಲಿದೆ. ವಿವಿಧ ಕಡೆಗಳಲ್ಲಿದ್ದ ಮರದ ಕಂಬಗಳನ್ನು ತೆರವುಗೊಳಿಸಿ, ಕಬ್ಬಿಣ, ಸಿಮೆಂಟ್ ಕಂಬಗಳನ್ನು ಸ್ಥಾಪಿಸಲಾಗಿದ್ದರೂ, ಇಲ್ಲಿ ಹಳೆಯ ಎರಡು ಕಂಬ ಹಾಗೆಯೇ ಉಳಿದಿದೆ. ಇದು ಮುರಿದು ಬಿದ್ದು ದುರಂತ ಸಂಭವಿಸುವ ಮೊದಲು ಬದಲಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.