ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ ಶ್ರೀಗಂಧ ಕೊರಡು ವಶ: ಬಾವಿಕ್ಕೆರೆ ನಿವಾಸಿ ಸೆರೆ
ಕಾಸರಗೋಡು: ಸ್ಕೂಟರ್‌ನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ೫.೫ ಕಿಲೋ ಶ್ರೀಗಂಧ ಕೊರಡುಗಳನ್ನು ಚುನಾವಣಾ ಫ್ಲೆಯಿಂಗ್ ಸ್ಕ್ವಾಡ್ ನಡೆಸಿದ ತಪಾಸಣೆಯಲ್ಲಿ ಪತ್ತೆಹಚ್ಚಿ ವಶಪಡಿಸಲಾಗಿದೆ.
ಇದಕ್ಕೆ ಸಂಬಂಧಿಸಿ ಮುಳಿಯಾರು ಬಾವಿಕ್ಕೆರೆಯ ಕೆ. ಮೂಸಾ (೩೨) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.
ಹೊಸದುರ್ಗ ಮಡಿಕೈ ವಾಚ್ಚಿ ಕ್ಕಾನದಲ್ಲಿ ಹೊಸದುರ್ಗ ವಿಧಾನಸಭಾ ಫ್ಲೈಯಿಂಗ್ ಸ್ಕ್ವಾಡ್ ಸೆಕ್ಟರ್‌ನ ಮೆಜಿ ಸ್ಟ್ರೇಟ್ ಹಾಗೂ ಕಯ್ಯೂರು- ಚೀಮೇನಿ ಪಂಚಾಯತ್ ಕಾಯ ದರ್ಶಿ ಆಗಿರುವ ರಮೇಶನ್, ಅರಣ್ಯ ಅಧಿಕಾರಿಗಳು ಮತ್ತು ನೀಲೇಶ್ವರ ಎಸ್.ಐ ಕೆ.ವಿ. ಮದುಸೂಧನನ್ ಎಂಬವರು ಒಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿದೆ. ಮಾಲು ಸಾಗಿಸಲು ಬಳಸಲಾದ ಸ್ಕೂಟರ್ ಮತ್ತು ಶ್ರೀಗಂಧದ ಮರಗಳನ್ನು ಕಡಿಯಲು ಬಳಸಲಾದ ಮೂರು ಕೊಡಲಿಗಳು, ಗರಗಸ ಮತ್ತಿತರ ಸಾಮಗ್ರಿಗಳನ್ನು ವಶಪಡಿಸಲಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಯನ್ನು ನಂತರ ನ್ಯಾಯಾಲಯದ ಆದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.