ಲೋಕಸಭಾ ಚುನಾವಣೆ: ಮಂಜೇಶ್ವರದಲ್ಲಿ ಬಿಜೆಪಿ ಚುನಾವಣಾ ಕಾರ್ಯಾಗಾರ ; ಒಂದು ವಿಭಾಗ ಕಾರ್ಯಕರ್ತರ ವಿರೋಧದಿಂದ ಮೊಟಕು

ಮಂಜೇಶ್ವರ: ಲೋಕಸಭಾ ಚುನಾ ವಣೆ ಪ್ರಚಾರ ಸಕ್ರಿಯವಾಗಿರುವಾಗಲೇ ಬಿಜೆಪಿಯ ಶಕ್ತಿ ಕೇಂದ್ರವಾದ ಮಂಜೇ ಶ್ವರದಲ್ಲಿ  ಬಿಜೆಪಿ ಕಾರ್ಯಕರ್ತರ ಮಧ್ಯೆ ಪರಸ್ಪರ ಸ್ಪರ್ಧೆ ಕಾವೇರತೊಡ ಗಿದೆ ಯೆಂಬ ಮಾತುಗಳು ಕೇಳಿಬಂದಿದೆ. ಮಂಡಲದಲ್ಲಿ  ಸ್ಪರ್ಧಿಸುವ ಪಕ್ಷದ ಅಭ್ಯರ್ಥಿಗೆ ಇದು ಪ್ರತಿಕೂಲವಾಗಿ ಪರಿಣಮಿಸಲಿದೆಯೆಂದೂ ಬಿಜೆಪಿ ಕಾರ್ಯಕರ್ತರು ಹೇಳುತ್ತಿದ್ದಾರೆ. ಇದರಿಂದ  ಎಲ್‌ಡಿಎಫ್ ಹಾಗೂ ಯುಡಿಎಫ್ ಮಧ್ಯೆಗಿನ  ನೇರ ಸ್ಪರ್ಧೆಗೆ  ಕಾಸರಗೋಡು ಲೋಕಸಭಾ ಕ್ಷೇತ್ರ ಸಾಗುತ್ತಿದೆಯೆಂದೂ ಕಾರ್ಯಕರ್ತರು ಹೇಳುತ್ತಿದ್ದಾರೆ. ಕಳೆದ ದಿನ ಮಂಜೇಶ್ವರ ಪಂಚಾಯತ್‌ನ ಕುಂಜತ್ತೂರಿನಲ್ಲಿ ನಡೆಸಬೇಕಾಗಿದ್ದ ಬಿಜೆಪಿ ಡಿವಿಶನ್ ಕಾರ್ಯಾಗಾರವನ್ನು ಒಂದು ವಿಭಾಗದ ವಿರೋಧದ ಹಿನ್ನೆಲೆಯಲ್ಲಿ ಮೊಟಕು ಗೊಂಡಿದೆ. ಕುಂಜತ್ತೂರು ಡಿವಿಶನ್ ವ್ಯಾಪ್ತಿಗೊಳಪಡದ ಕೆಲವರು ಸಭೆಗೆ ತಲುಪಿ ಸಮಸ್ಯೆ ಸೃಷ್ಟಿಸಿದ ಹಿನ್ನೆಲೆಯಲ್ಲಿ ಕಾರ್ಯಾ ಗಾರ ಅಲ್ಲೋಲಕಲ್ಲೋಲ ಗೊಂಡಿದೆ ಯೆಂದು ನೇತಾರರು ತಿಳಿಸಿ ದ್ದಾರೆ. ಕಾರ್ಯಾಗಾರಕ್ಕೆ ತಲುಪಿದ ಜಿಲ್ಲಾ ಉಪಾಧ್ಯಕ್ಷ ಸುಧಾಮ ಗೋ ಸಾಡ, ಜಿಲ್ಲಾ ಸಮಿತಿ ಸದಸ್ಯ ಯಾದವ ಬಡಾಜೆ ಕಾರ್ಯಾಗಾರ ನಡೆಸಲಾಗದೆ ಮರಳಿದರು. ಚುನಾವಣಾ ಚಟುವಟಿP ಯನ್ನು ತ್ವರಿತಗೊಳಿಸುವಂತೆ ನೇತಾರರು ನಿರ್ದೇಶ ನೀಡಿದ್ದು, ಆದರೆ ಪಕ್ಷದ ಸಮಸ್ಯೆಯನ್ನು ಪರಿಹರಿಸಿ ಕಾರ್ಯಾಗಾರ ನಡೆಸಿದರೆ ಸಾಕೆಂದು ಇನ್ನೊಂದು ವಿಭಾಗ ಹಠಹಿಡಿದಿದೆ.  ಜಿಲ್ಲಾ ಅಧ್ಯಕ್ಷ ತಲುಪಿ ಸಭೆ ನಡೆಸಿದರೆ ಸಾಕೆಂದೂ ಅವರು ಒತ್ತಾಯಿಸಿದ್ದಾರೆ. ದೀರ್ಘ ಕಾಲದಿಂದ ಪಕ್ಷದಲ್ಲಿ ಕಾಣುತ್ತಿರುವ ಅಸಮಾಧಾನದ ಮುಂದುವರಿಕೆಗಾಗಿ ಚುನಾವಣಾ ಪ್ರಚಾರ ಕಾರ್ಯಾಗಾರ ಅಲ್ಲೋಲಕಲ್ಲೋಲ ಸ್ಥಿತಿಗೆ ತಲುಪಲು ಕಾರಣವೆಂಬ ಆರೋಪಗಳಿವೆ.  ಬಿಜೆಪಿಗೆ ಹೆಚ್ಚು ಸ್ವಾಧೀನವುಳ್ಳ ಮಂಜೇಶ್ವರ, ಕಾಸರಗೋಡು ವಿಧಾನಸಭಾ ಕ್ಷೇತರದಲ್ಲಿ ಪಕ್ಷದೊಳಗಿನ  ಭಿನ್ನಾಭಿಪ್ರಾಯ,   ಅಸಮಾಧಾನ ಚುನಾವಣಾ ಪ್ರಚಾರ ಪ್ರಕ್ರಿಯೆಗೂ ಬೆದರಿಕೆಯಾಗಿದೆ ಯೆಂಬ  ಆರೋಪ ಕೇಳಿಬರುತ್ತಿದೆ.

You cannot copy contents of this page