ದೇಹಕ್ಕೆ ಬೆಂಕಿ ತಗಲಿ ಗಾಯಗೊಂಡಿದ್ದ ಮಹಿಳೆ ಮೃತ್ಯು
ಉಪ್ಪಳ: ಮನೆ ಹಿತ್ತಿಲಿನಲ್ಲಿ ಬೆಳೆದ ಹುಲ್ಲಿಗೆ ಕಿಚ್ಚಿಡುತ್ತಿದ್ದಾಗ ಬೆಂಕಿ ದೇಹಕ್ಕೆ ತಗುಲಿ ಸುಟ್ಟು ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಹಿಳೆ ಮೃತಪಟ್ಟರು. ವರ್ಕಾಡಿ ತೌಡುಗೋಳಿ ಸುಣ್ಣಂಗಳ ನಿವಾಸಿ ದಿ| ಕ್ಸೇವಿಯರ್ರ ಪತ್ನಿ ಆಗ್ನೇಸ್ ಮೊಂತೇರೊ (೬೬) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಈ ತಿಂಗಳ ೧೧ರಂದು ಸಂಜೆ ಮನೆ ಹಿತ್ತಿಲಿನಲ್ಲಿ ಹುಲ್ಲಿಗೆ ಬೆಂಕಿ ಹಚ್ಚುತ್ತಿದ್ದಾಗ ಅವರ ದೇಹಕ್ಕೆ ಬೆಂಕಿ ತಗಲಿತ್ತು. ಇದರಿಂದ ಗಾಯಗೊಂಡ ಇವರನ್ನು ದೇರಳಕಟ್ಟೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಂಜೆ ಮೃತಪಟ್ಟರು. ಮೃತರು ಮಕ್ಕಳಾದ ನ್ಯಾನ್ಸಿ ಡಿ’ಸೋಜಾ, ವಿಲ್ಫ್ರೆಡ್ ಡಿ’ಸೋಜಾ, ಡೋಲ್ಫಿ ಡಿ’ಸೋಜಾ, ಹೆರಾಲ್ಡ್ ಡಿ’ಸೋಜಾ, ರಿಚಾರ್ಡ್ ಡಿ’ಸೋಜಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.