ಕೇರಳದಲ್ಲಿ ತೀವ್ರಗೊಂಡ ತಾಪಮಾನ: ತ್ರಿಶೂರ್ನಲ್ಲಿ 40 ಡಿಗ್ರಿಗೆ ತಲುಪುವ ಮುನ್ನೆಚ್ಚರಿಕೆ
ತಿರುವನಂತಪುರ: ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ತೀವ್ರವಾದ ಬಿಸಿಗೆ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಶನಿವಾರದವರೆಗೆ ತೃಶೂರು ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ ೪೦ ಡಿಗ್ರಿ ಸೆಲ್ಶಿಯಸ್ವರೆಗೂ, ಕೊಲ್ಲಂ, ಪಾಲಕ್ಕಾಡ್ ಜಿಲ್ಲೆಗಳಲ್ಲಿ ೩೯ ಡಿಗ್ರಿ ಸೆಲ್ಶಿಯಸ್ವರೆಗೂ, ಪತ್ತನಂತಿಟ್ಟ ಜಿಲ್ಲೆಯಲ್ಲಿ ೩೮ಡಿಗ್ರಿ ಸೆಲ್ಶಿಯಸ್ವರೆಗೂ, ಕೋಟ್ಟಯಂ, ಎರ್ನಾಕುಳಂ, ಕಲ್ಲಿಕೋಟೆ, ಕಣ್ಣೂರು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ೩೭ಡಿಗ್ರಿ ಸೆಲ್ಶಿಯಸ್ ವರೆಗೂ, ಆಲಪ್ಪುಳ, ಮಲಪ್ಪುರಂ, ಕಾಸರಗೋಡು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ೩೬ಡಿಗ್ರಿ ಸೆಲ್ಶಿಯಸ್ವರೆಗೂ ಹೆಚ್ಚಲು ಸಾಧ್ಯತೆ ಇದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ.
ಸಾಮಾನ್ಯಕ್ಕಿಂತ ೪ ಡಿಗ್ರಿವರೆಗೆ ತಾಪ ಹೆಚ್ಚಲು ಸಾಧ್ಯತೆ ಇದೆ ಎಂದು ಮುನ್ನೆಚ್ಚರಿಕೆಯಲ್ಲಿ ತಿಳಿಸಲಾಗಿದೆ. ಈ ಮಧ್ಯೆ ವಿವಿಧ ರಾಜ್ಯಗಳಲ್ಲಿ ಮಳೆಗೆ ಸಾಧ್ಯತೆ ಇದೆ ಎಂಬ ಮುನ್ನೆಚ್ಚರಿಕೆಯನ್ನೂ ನೀಡಲಾಗಿದೆ. ಮಂಗಳವಾರ ಕೊಲ್ಲಂ, ಆಲಪ್ಪುಳ, ಕೋಟ್ಟಯಂ, ಎರ್ನಾಕುಳಂ ಜಿಲ್ಲೆಗಳಲ್ಲಿ ಹಾಗೂ ಶುಕ್ರವಾರ ತಿರುವನಂತಪುರ, ಕೊಲ್ಲಂ, ಆಲಪ್ಪುಳ, ಎರ್ನಾಕುಳಂ ಜಿಲ್ಲೆಗಳಲ್ಲೂ ಅಲ್ಪ ಪ್ರಮಾಣದ ಮಳೆಗೆ ಸಾಧ್ಯತೆ ಇದೆ ಎನ್ನಲಾಗಿದೆ.