ರಾಹುಲ್ ಗಾಂಧಿ ಅನರ್ಹತೆ ರದ್ದು

ನವದೆಹಲಿ:  ಮೋದಿ ಉಪನಾಮೆ ಹೇಳಿಕೆ ಪ್ರಕರಣದಲ್ಲಿ ಸೂರತ್ ಚೀಫ್ ಜ್ಯುಡೀಶಿಯಲ್  ಮೆಜಿಸ್ಟ್ರೇಟ್ ನ್ಯಾಯಾಲಯದಿಂದ ೨ ವರ್ಷ ಶಿಕ್ಷೆಗೊಳಗಾಗಿ ಅದರ ಹೆಸರಲ್ಲಿ ವಯನಾಡ್ ಸಂಸದ ಸ್ಥಾನವನ್ನು ಕಳೆದುಕೊಳ್ಳಬೇಕಾಗಿ ಬಂದ ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿಯವರ ಲೋಕಸಭಾ ಸದಸ್ಯತನವನ್ನು    ಪುನರ್ ಸ್ಥಾಪಿಸಲಾಗಿದೆ.

ಸದಸ್ಯತನ ರದ್ದುಪಡಿಸಿದ ಆದೇಶ ವನ್ನು ವಾಪಸು ಪಡೆದು ಲೋಕಸಭಾ ಕಾರ್ಯದರ್ಶಿಯವರು ಇಂದು ಬೆಳಿಗ್ಗೆ  ಹೊಸ ಅಧಿಸೂಚನೆ ಜ್ಯಾರಿಗೊಳಿಸಿ ದ್ದಾರೆ. ಇದರಿಂದ ರಾಹುಲ್ ಗಾಂಧಿಯವರ ಲೋಕಸಭೆಗೆ ರೀ ಎಂಟ್ರಿ ಹಾದಿ ಸುಗಮಗೊಂಡಿದೆ. ಅವರು ಇಂದು ಮಧ್ಯಾಹ್ನವೇ ಲೋಕಸಭೆಯಲ್ಲಿ ಹಾಜರಾಗುವ ಸಾಧ್ಯತೆಯಿದೆ.

ಮೋದಿ ಉಪನಾಮೆ ಹೇಳಿಕೆಗಾಗಿ ೨೦೧೯ರಲ್ಲಿ ಗುಜರಾತ್‌ನ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಅವರು ಹೂಡಿದ ಮಾನನಷ್ಟ ಪ್ರಕರಣದಲ್ಲಿ   ರಾಹುಲ್ ಗಾಂಧಿಗೆ ಸೂರತ್ ನ್ಯಾಯಾಲಯ ನೀಡಿದ ೨ ವರ್ಷ ಸಜೆಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ರಾಹುಲ್ ಗಾಂಧಿ ಮೊದಲು ಜಿಲ್ಲಾ ನ್ಯಾಯಾಲ ಯಕ್ಕೂ ಬಳಿಕ ಅಹಮ್ಮದಾಬಾದ್ ಹೈಕೋರ್ಟ್‌ಗೂ ಮೇಲ್ಮನವಿ ಸಲ್ಲಿಸಿದ್ದರು. ಆ ಎರಡೂ ನ್ಯಾಯಾಲಯಗಳು ರಾಹುಲ್ ಗಾಂಧಿಯವರ ಅರ್ಜಿಯವರನ್ನು ಪುರಸ್ಕರಿಸಿರಲಿಲ್ಲ. 

Leave a Reply

Your email address will not be published. Required fields are marked *

You cannot copy content of this page