ದೈವಕಲಾವಿದ ನಿಗೂಢ ನಾಪತ್ತೆ
ಉಪ್ಪಳ: ದೈವ ಕಲಾವಿದರೊಬ್ಬರು ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಮುಳಿಂಜ ಮಾಹಿನ್ ಹಾಜಿ ರಸ್ತೆ ನಿವಾಸಿ ದಿ| ಮಾಂಕು ಎಂಬವರ ಪುತ್ರ ತಿಮ್ಮಪ್ಪ ಎಂ (೫೮) ಎಂಬವರು ನಾಪತ್ತೆಯಾದ ವ್ಯಕ್ತಿ. ಈ ತಿಂಗಳ ೨೭ರಂದು ಬೆಳಿಗ್ಗೆ ೯ ಗಂಟೆ ವೇಳೆ ತಿಮ್ಮಪ್ಪ ಮನೆಯಿಂದ ಹೊರಗೆ ತೆರಳಿದ್ದು, ಬಳಿಕ ಮರಳಿ ಬಂದಿಲ್ಲವೆನ್ನಲಾಗಿದೆ. ಮನೆಯವರು ವಿವಿಧೆಡೆ ಹುಡುಕಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಪುತ್ರಿ ಅನಿತ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಇದರಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ತಲಪ್ಪಾಡಿ ಟೋಲ್ ಗೇಟ್ನಲ್ಲಿರುವ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ತಿಮ್ಮಪ್ಪ ಕರ್ನಾಟಕ ಭಾಗಕ್ಕೆ ತೆರಳುತ್ತಿರುವುದು ಕಂಡುಬಂದಿದೆ. ಅದೇ ರೀತಿ ಕೆಸಿ ರೋಡ್ ಕಿನ್ಯದಲ್ಲಿರುವ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಅದರ ಲ್ಲೂ ಅವರ ದೃಶ್ಯ ಪತ್ತೆಯಾಗಿದೆ. ಆದರೆ ಅನಂತರ ಎಲ್ಲಿಗೆ ತೆರಳಿದ್ದಾ ರೆಂದು ತಿಳಿದುಬಂದಿಲ್ಲ. ಪೊಲೀಸರು ಶೋಧ ಮುಂದುವರಿಸಿದ್ದಾರೆ.