ಈಸ್ಟರ್ ಹಬ್ಬ ಆಚರಣೆ ನಾಳೆ
ಕಾಸರಗೋಡು : ಏಸುಕ್ರಿಸ್ತನ ಪುನರುತ್ಥಾನದ ಹಬ್ಬವಾದ ಈಸ್ಟರ್ ಹಬ್ಬವನ್ನು ನಾಳೆ ಕ್ರೈಸ್ತ ಬÁಂದsವರು ಆಚರಿಸುವರು. ಇದರಂಗವಾಗಿ ಇಂದು ರಾತ್ರಿ ಚರ್ಚ್ಗಳಲ್ಲಿ ವಿಧಿವಿ ಧಾನ ಹಾಗೂ ಬಲಿಪೂಜೆ ನಡೆಯ ಲಿದೆ. ಕಯ್ಯಾರ್ ಕ್ರಿಸ್ತರಾಜ ದೇವಾಲ ಯದಲ್ಲಿ ನಡೆಯಲಿರುವ ವಿಧಿ ವಿಧಾ ನಕ್ಕೆ ಮಂಗಳೂರು ಜೆಪ್ಪು ಸೆಮಿನರಿಯ ನಿವೃತ್ತ ಪ್ರಾಧ್ಯಾಪಕ ವಂ| ಫಾ. ವಿಲ್ಲಿಯಂ ಬರ್ಬೋಜಾ ಹಾಗೂ ಧರ್ಮಗುರು ವಂ. ಫಾ. ವಿಶಾಲ್ ಮೊನಿಸ್ ನೇತೃತ್ವ ನೀಡುವರು,
ಈಸ್ಟರ್ ಮೊಂಬತ್ತಿ ಯನ್ನು ಧರ್ಮಗುರುಗಳು ಬೆಳಗಿಸಿದ ಬಳಿಕ ಭಾಗವಹಿಸುವ ಸಮಸ್ತ ಕ್ರೈಸ್ತರು ಈ ಅಗ್ನಿಯ ಮೂಲಕ ಮೇಣದ ಬತ್ತಿಗಳನ್ನು ಉರಿಸಿ ಪ್ರಾರ್ಥನೆ ಸಲ್ಲಿಸುವರು. ಬೈಬಲಿನ ಹಳೆಯ ಹಾಗೂ ಹೊಸ ಒಡಂಬಡಿಕೆಯ ಆಯ್ದ ಭಾಗಗಳ ವಾಚನದ ಬಳಿಕ ಧರ್ಮಗುರುಗಳು ಪ್ರವಚನ ಹಾಗೂ ಸಂದೇಶ ನೀಡುವರು.
ಶುಭ ಶುಕ್ರವಾರದಂಗವಾಗಿ ಕಯ್ಯಾರ್ ಕ್ರಿಸ್ತರಾಜ ದೇವಾಲಯದಲ್ಲಿ ನಡೆದ ವಿಧಿ ವಿಧಾನಕ್ಕೆ ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಬಿಷಪ್ ವಂದನೀಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ನೇತೃತ್ವ ನೀಡಿದರು. ಕಯ್ಯಾರ್ ಇಗರ್ಜಿಯ ಧರ್ಮಗುರು ವಂ| ಫಾ. ವಿಶಾಲ್ ಮೊನಿಸ್, ಮಂಗಳೂರಿನ ಧರ್ಮಗುರು ವಂ| ಫಾ. ವಿಲ್ಲಿಯಂ ಬರ್ಬೋಜಾ ಉಪಸ್ಥಿತರಿದ್ದರು.