ಮೋದಿ ಮತ್ತೆ ಪ್ರಧಾನಿಯಾಗಬೇಕಾದುದು ದೇಶದ ಅಗತ್ಯ-ವಿಎಚ್‌ಪಿ

ಮಂಜೇಶ್ವರ: ವಿಶ್ವಹಿಂದೂ ಪರಿಷತ್ ಜಿಲ್ಲಾ ಸಮಿತಿ ಸಭೆ ಹೊಸಂಗಡಿ ಪ್ರೇರಣಾದಲ್ಲಿ ಜರಗಿತು. ಸಭೆಯಲ್ಲಿ ಮೋದಿ ಈ ದೇಶದ ಸಂಪತ್ತು ಆಗಿದ್ದು, ಮತ್ತೆ ಪ್ರಧಾನಿಯಾಗಬೇಕಾದದ್ದು ದೇಶದ ಅವಶ್ಯ ಕತೆಯಾಗಿದೆ. ಈ ಹಿನ್ನೆಲೆಯಲ್ಲಿ   ಕಾರ್ಯಕರ್ತರು ನೂರು ಶೇಕಡಾ ಮತದಾನವಾಗುವಂತೆಯೂ  ಬಿಜೆಪಿ ಗೆಲುವಿಗೆ ಪ್ರಯತ್ನಿಸಬೇಕೆಂದು ಅಭಿಪ್ರಾಯಪಡ ಲಾಯಿತು. ಅಭಿಪ್ರಾಯ ವ್ಯತ್ಯಾಸಗಳಿದ್ದರೆ ಚುನಾವಣಾ ಸಮಯ ಅದಕ್ಕೆ ಸೂಕ್ತವಲ್ಲ. ಭಿನ್ನಾಭಿಪ್ರಾಯ ಮರೆತು ಮೋದಿಗೆ ಬೆಂಬಲವಾಗಿ ಎಲ್ಲರೂ ನಿಲ್ಲಬೇಕೆಂದು ಸಭೆಯಲ್ಲಿ ತೀರ್ಮಾನಿ ಸಲಾಯಿತು. ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸಿದರು. ಸೇವಾ ಪ್ರಮುಖ್ ಸುರೇಶ್ ಶೆಟ್ಟಿ ಪರಂಕಿಲ, ಸಂಕಪ್ಪ ಭಂಡಾರಿ, ಡಾ| ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಕೃಷ್ಣ ಶಿವಕೃಪಾ ಕುಂಜತ್ತೂರು, ಮೀರಾ ಆಳ್ವ ಟೀಚರ್, ಯಾದವ ಕೀರ್ತೇಶ್ವರ, ಹರಿಣಾಕ್ಷಿ ಕುಂಬಳೆ, ವಾಮನ ಆಚಾರ್ಯ, ಉಳು ವಾನ ಶಂಕರನಾರಾಯಣ ಭಟ್ ಉಪಸ್ಥಿತರಿದ್ದರು.

RELATED NEWS

You cannot copy contents of this page