ಮೇಲ್ಛಾವಣಿ, ಗೋಡೆ, ಬಾಗಿಲು, ಕಿಟಿಕಿಗಳಿಲ್ಲದ ಶೋಚನೀಯ ಮನೆಗೂ ಕಟ್ಟಡ ತೆರಿಗೆ ಕೇಳಿ ಪಂಚಾಯತ್‌ನಿಂದ ನೋಟೀಸು: ಬಡ ಕುಟುಂಬ ತೀವ್ರ ಸಂಕಷ್ಟದಲ್ಲಿ

ಕಾಸರಗೋಡು: ಮೇಲ್ಛಾವಣಿ,  ಬಾಗಿಲು, ಗೋಡೆಯಿಲ್ಲದ ಶೋಚನೀ ಯ ಮನೆಗೂ ಪಂಚಾಯತ್ ಕಟ್ಟಡ ತೆರಿಗೆಯಾಗಿ ೨೭೯ ರೂ. ಪಾವತಿಸು ವಂತೆ ತಿಳಿಸಿ ನೋಟೀಸು ನೀಡಿದ ಬಗ್ಗೆ ದೂರಲಾಗಿದೆ. ಪುಲ್ಲೂರು ಪೆರಿಯ ಪಂಚಾಯತ್ ವ್ಯಾಪ್ತಿಯ  ನಾಲ್ಕನೇ ವಾರ್ಡ್‌ಗೊಳಪಟ್ಟ  ತಾಣಿಯೋಟ್ ಕನಿಯಂಕುಂಡ್ ಎಂಬಲ್ಲಿನ ಮಧು-ಶ್ಯಾಮಲಾ ದಂಪತಿ ವಾಸಿಸುವ ಮನೆಗೆ ಪಂಚಾಯತ್ ಕಟ್ಟಡ ತೆರಿಗೆ ಹೇರಿದೆ. ಈ ಮನೆಗೆ ಸರಿಯಾದ ಗೋಡೆಯಿಲ್ಲ. ಬಾಗಿಲು, ಕಿಟಿಕಿಗಳಿ ಲ್ಲ. ಮೇಲ್ಛಾವಣಿಗೆ ಮಡಲು ಹಾ ಸಲಾಗಿದೆ.  ಶೋಚನೀಯ ಸ್ಥಿತಿಯಲ್ಲಿರುವ ಇಂತಹ ಮನೆಗೂ ಪಂಚಾಯತ್ ತೆರಿಗೆ ಹೇರಿರುವುದು ಕುಟುಂಬವನ್ನು ಸಂಕಷ್ಟಕ್ಕೀಡು ಮಾಡಿದೆ. ಈ ಕುಟುಂಬಕ್ಕೆ  ಶೌಚಾಲಯ, ಬಚ್ಚಲು ಕೊಠಡಿಯೂ ಇಲ್ಲದೆ ಸಮಸ್ಯೆಗೀಡಾ ಗಿದೆ. ಹೀಗಿರುವಾಗಲೇ ಪಂಚಾಯತ್  ಕಟ್ಟಡ ತೆರಿಗೆಯಾಗಿ ೨೭೯ ರೂಪಾಯಿ ಪಾವತಿಸುವಂತೆ ತಿಳಿಸಿ ನೋಟೀಸು ಕಳುಹಿಸಲಾಗಿದೆ. ಈ ಮೊತ್ತ ಕೇವಲ ಆರು ತಿಂಗಳದ್ದಾಗಿದೆ. ಈ ತೆರಿಗೆ  ಪಾವತಿಸದಿದ್ದಲ್ಲಿ ಮನೆಯೊಳಗೆ ಇರುವ ಬೆಲೆಬಾಳುವ ವಸ್ತುಗಳನ್ನು ಜಫ್ತಿ ಮಾಡುವುದಾಗಿ ನೋಟೀಸ್‌ನಲ್ಲಿ ತಿಳಿಸಲಾಗಿದೆ. ಅದು ಮಾತ್ರವಲ್ಲ ಅದಕ್ಕೆ ತಗಲುವ ಖರ್ಚನ್ನೂ ಈ ದಂಪತಿ ನೀಡಬೇಕಾಗಿದೆ. ಇಲ್ಲದಿದ್ದಲ್ಲಿ ೧೯೯೪ರ ಪಂಚಾಯತ್ ಆಕ್ಟ್ ೧೩ನೇ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಮುನ್ನೆಚ್ಚರಿಕೆ ನೀಡಲಾಗಿದೆ.

ಈ ಕುಟುಂಬ ಮೂಲತಃ ನೀಲೇ ಶ್ವರ ಬಳಿಯ ಮಡಿಕೈ ನಿವಾಸಿಯಾಗಿ ದ್ದಾರೆ.  ಮಧು ಸಾರಣೆ ಕಾರ್ಮಿಕನಾಗಿ ದ್ದಾರೆ. ಅವರಿಗೆ ಅಪಸ್ಮಾರ ರೋಗವೂ ಬಾಧಿಸುತ್ತಿದೆ. ಒಮ್ಮೆ ಕೆಲಸ ನಿರ್ವಹಿಸುತಿ ದ್ದಾಗ ಕಟ್ಟಡದ ಮೇಲಿನಿಂದ  ಬಿದ್ದು ಗಾಯಗೊಂಡು. ಅದಕ್ಕೆ ಬೇಕಾದ ಚಿಕಿತ್ಸಾ ಖರ್ಚಿಗಾಗಿ ಇದ್ದ ಜಾಗವನ್ನು ಮಾರಾಟ ನಡೆಸಬೇಕಾಯಿತು. ಅನಂತರಪೆರಿಯ ಕನಿಯಾಲ ಕುಂಡ್ ಪಾದೆ ಪ್ರದೇಶದಲ್ಲಿ ಇವರು ಸಣ್ಣದೊಂದು ಗುಡಿಸಲು ಕಟ್ಟಿದರು. ೨೦ ವರ್ಷಗಳಿಂದ ಅಲ್ಲಿ ವಾಸಿಸುತ್ತಿದ್ದಾರೆ. ಮಧುವಿಗೆ ಅಸೌಖ್ಯ ಬಾಧಿಸಿದುದರಿಂದ ಶ್ಯಾಮಲಾ ಕೆಲಸಕ್ಕೆ ತೆರಳಬೇಕಾಗಿ ಬಂತು. ಆದರೆ ಕ್ರಮೇಣ ಕೆಲಸ ಕಡಿಮೆಯಾಗತೊಡಗಿದುದರಿಂದ ಅದನ್ನು ಉಪೇಕ್ಷಿಸಬೇಕಾಗಿಬಂತು. ಈಗ ಕೆಲವರ ಸಹಾಯದೊಂದಿಗೆ  ನೀಲೇಶ್ವರದ ರಸ್ತೆ ಬದಿ ಹೋಟೆಲ್ ನಡೆಸುತ್ತಿದ್ದಾರೆ. ಅದರಿಂದ ಸಿಗುವ ಅತ್ಯಲ್ಪ ಆದಾಯದಿಂದ ದಿನ ಸಾಗಿಸಬೇಕಾಗಿದೆ. ಕುಟುಂಬ ಇಂತಹ ದಯನೀಯ ಪರಿಸ್ಥಿತಿಯಲ್ಲಿರು ವಾಗಲೇ ಅವರು ವಾಸಿಸುವ ಗುಡಿಸಲಿಗೂ ಕಟ್ಟಡ ತೆರಿಗೆ ಹೇರಿ ಪಂಚಾಯತ್ ನೋಟೀಸು ನೀಡಿರುವುದು ಇನ್ನಷ್ಟು ಸಂದಿಗ್ಥತೆ ಸೃಷ್ಟಿಗೆ ಕಾರಣವಾಗಿದೆ.

Leave a Reply

Your email address will not be published. Required fields are marked *

You cannot copy content of this page