ಮಂಗಳೂರಿನ ಫಿಝ್ಜಾ ಬೈ ನೆಕ್ಸಸ್ ಮಾಲ್‌ನಲ್ಲಿ ಸ್ನೋ ಫ್ಯಾಂಟಸಿ ಕಾರ್ಯಾರಂಭ

ಮಂಗಳೂರು: ಇಲ್ಲಿನ ಫಿಝ್ಜಾ ಬೈ ನೆಕ್ಸಸ್ ಮಾಲ್‌ನಲ್ಲಿ ಸ್ನೋ ಫ್ಯಾಂಟಸಿ ಇಂದಿನಿಂದ ಆರಂಭಗೊಂಡಿದೆ. ಭಾರತದ ಪ್ರತಿಷ್ಠಿತ ಹಿಮ ವಾತಾವರಣದ ಮತ್ತು ಮಂಜಿನ ವಿಶೇಷ ಅನುಭವ ನೀಡುವ ಸ್ನೋ ಫ್ಯಾಂಟಸಿ ಪಾಂಡೇಶ್ವರದಲ್ಲಿರುವ ಫಿಝ್ಜಾ ಆರಂಭಗೊಂಡಿತು. ಮಂಗಳೂರಿನಲ್ಲಿ ಇದೇ ಪ್ರಥಮವಾಗಿ ಆರಂಭಗೊಂಡ ಸ್ನೋ ಫ್ಯಾಂಟಸಿಯಲ್ಲಿ ಹಿಮ ಮಳಿಗೆಯೊಳಗೆ ಮಂಜು ಬೀಳುವ ಅನುಭವ, ಡಿ.ಜೆ ಕಾಫಿ ಶಾಪ್, ಹಿಮ ಪ್ರಾಣಿಗಳ ಚಿತ್ರಗಳನ್ನು ಆಸ್ವಾದಿಸುವ, ಕಣಿವೆಯೊಳಗೆ ಓಡಾಡುವ ಅವಕಾಶ ಇಲ್ಲಿದೆ. ಅಂತಾರಾಷ್ಟ್ರೀಯ ಗುಣಮಟ್ಟದ ಸ್ನೋ ಫ್ಯಾಂಟಸಿ ಪ್ರವೇಶ ಪಡೆದವರಿಗೆ ಜಾಕೆಟ್, ಸಾಕ್ಸ್, ಬೂಟ್ ಮುಂತಾದವುಗಳನ್ನು ನೀಡಲಾಗುವುದು ಹಾಗೂ ಅಪಾಯವನ್ನು ತಡೆಗಟ್ಟುವ ಸೇಫ್ಟಿ ಫೀಚರ್‌ಗಳನ್ನು ಇಲ್ಲಿ ಅಳವಡಿಸಲಾಗಿದೆ. ನೆಕ್ಸಸ್ ಸೆಲೆಕ್ಟ್ ಮಾಲ್‌ನ ಸಿಒಒ ಜಯನ್, ಮೆನೇಜ್‌ಮೆಂಟ್ ಕನ್ಸಲ್ಟೆಂಟ್ ವೇಣು ಶರ್ಮಾ, ಡೈರೆಕ್ಟರ್ ಆದಿತ್ಯ, ನಿರ್ದೇಶಕ ವಿಪಿನ್ ಝಕಾರಿಯಾ ಮೊದಲಾದವರು ಸ್ನೋ ಫ್ಯಾಂಟಸಿಯಲ್ಲಿ ಲಭ್ಯವಾಗುವ ಅದ್ಭುತ ಅನುಭವಗಳ ಬಗ್ಗೆ ವಿವರಿಸಿದರು. ಅಂತಾರಾಷ್ಟ್ರೀಯ ಗುಣಮಟ್ಟದ ಸೌಂಡ್ ಸಿಸ್ಟಂ, ಲೇಸರ್ ಶೋ, ಮ್ಯಾಜಿಕಲ್ ಸ್ನೋ ಪಾಲ್, ರೋಪ್ ವಾಕ್ ಇಲ್ಲಿನ ವಿಶೇಷತೆಗಳಾಗಿವೆ ಎಂದು ಚೆಯರ್‌ಮ್ಯಾನ್ ಟಿ.ಎಸ್. ಅಶೋಕನ್ ತಿಳಿಸಿದ್ದಾರೆ. ಇಂದು ಬೆಳಿಗ್ಗೆ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಂಗಳೂರು ಮಾಲ್ ಮುಖ್ಯಸ್ಥ ಅರವಿಂದ್ ಶ್ರೀವಾಸ್ತವ್, ನೆಕ್ಸಸ್ ಸೆಲೆಕ್ಟ್ ಮಾಲ್‌ನ ಮುಖ್ಯಸ್ಥ ತನ್ವೀರ್ ಶೇಕ್ ಉಪಸ್ಥಿತರಿದ್ದರು.

You cannot copy contents of this page