ಅಗಲ್ಪಾಡಿ ಕ್ಷೇತ್ರದಲ್ಲಿ ಸಹಸ್ರ ಚಂಡಿಕಾಯಾಗ ಸಮಾಪ್ತಿ

ಬದಿಯಡ್ಕ: ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬುಧವಾರ ಋಕ್‌ಸಂಹಿತಾ ಯಾಗ ಮತ್ತು ಸಹಸ್ರಚಂಡಿಕಾ ಹೋಮದ ಪೂರ್ಣಾಹುತಿ ನಡೆಯಿತು. ಊರಪರವೂರ ಸಹಸ್ರಾರು ಮಂದಿ ಭಗವದ್ಭಕ್ತರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು. ಎಡನೀರು ಮಠಾದಿsÃಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ದಿವ್ಯ ಸಾನ್ನಿಧ್ಯ ವಹಿಸಿ ಅನುಗ್ರಹಿಸಿದರು. ನಾಡಿನ ಅನೇಕ ಗಣ್ಯರು ಪಾಲ್ಗೊಂಡಿದ್ದರು.
ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮತ್ತು ವೇದಮಾತಾಟ್ರಸ್ಟ್ ಅಗಲ್ಪಾಡಿ ಇವರ ನೇತೃತ್ವದಲ್ಲಿ ಆರಂಭಗೆsೆÆAಡ ಯಾಗದಲ್ಲಿ ಶ್ರೀದುರ್ಗಾಪರಮೇಶ್ವರೀ ಅಮ್ಮನವರಿಗೆ ಅಷ್ಟೋತ್ತರ ಶತಕಲಶಾಭಿಷೇಕ, ಅಷ್ಟೋತ್ತರ ಸಹಸ್ರ ನಾರೀಕೇಳ ಗಣಪತಿ ಯಾಗ, ಋಕ್ ಸಂಹಿತಾ ಯಾಗ, ಐಕಮತ್ಯ ಹೋಮ, ರುದ್ರಹೋಮ, ಧನ್ವಂತರಿ ಹೋಮ ಮತ್ತು ಸಹಸ್ರಚಂಡಿಕಾ ಯಾಗ ಜರಗಿತು.
ಬ್ರಹ್ಮಶ್ರೀ ದೇಲಂಪಾಡಿ ಗಣೇಶತಂತ್ರಿಗಳು, ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ಮಲಬಾರ್ ದೇವಸ್ವಂ ಬೋರ್ಡ್ ನ ಅದಿsಕಾರಿಗಳು, ಹಿರಿಯರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಮೊದಲಾದ ಅನೇಕ ಗಣ್ಯರು ಕೊನೆಯ ದಿನ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಪಿಲಾಂಕಟ್ಟೆಯಿAದ ಅಗಲ್ಪಾಡಿ ದೇವಸ್ಥಾನಕ್ಕೆ ವಿಶೇಷ ಬಸ್ಸು ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಈ ಉಚಿತ ಬಸ್ಸು ಸೇವೆಯನ್ನು ಶ್ರೀದುರ್ಗಾಫ್ರೆಂಡ್ಸ್ ಅಗಲ್ಪಾಡಿ ಹಾಗೂ ಪ್ರಚಾರ ಸಮಿತಿ ಪ್ರಾಯೋಜಕತ್ವವನ್ನು ವಹಿಸಿತ್ತು. ಇದು ಭಗವದ್ಬಕ್ತರ ಪ್ರಶಂಸೆಗೆ ಪಾತ್ರವಾಗಿತ್ತು. ಉರಿಬಿಸಿಲಿನ ಮಧ್ಯೆಯೂ ಕ್ಷೇತ್ರಕ್ಕೆ ಆಗಮಿಸಿದ ಭಗವದ್ಭಕ್ತರಿಗೆ ಅಲ್ಲಲ್ಲಿ ಪಾನೀಯವನ್ನು ನೀಡುವ ವ್ಯವಸ್ಥೆ ಗಮನಸೆಳೆದಿತ್ತು. ಪೂರ್ಣಾಹುತಿ ಕಾರ್ಯಕ್ರಮದ ವೀಕ್ಷಣೆಗೆ 4 ಎಲ್‌ಇಡಿ ಪರದೆಯನ್ನು ಅಳವಡಿಸಲಾಗಿತ್ತು.

Leave a Reply

Your email address will not be published. Required fields are marked *

You cannot copy content of this page