ಬಾಲಕಿಗೆ ಕಿರುಕುಳ ಪೋಕ್ಸೋ: ಆರೋಪಿ ಸೆರೆ 

ಮಂಜೇಶ್ವರ: ಹದಿನಾಲ್ಕರ ಹರೆಯದ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಯನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕದ ಬಂಟ್ವಾಳ ನಿವಾಸಿ ಕ್ರಿಸ್ತು ಡಿ’ಸೋಜಾ (೫೪) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ.  ಈತ ಇತ್ತೀಚೆಗೆ ಹದಿನಾಲ್ಕರ ಹರೆಯದ ಬಾಲಕನಿಗೆ ಕಿರುಕುಳ ನೀಡಿದ್ದನೆಂದು ದೂರಲಾಗಿದೆ. ಈ ಬಗ್ಗೆ ಮಂಜೇಶ್ವರ ನಿವಾಸಿಗೆ ಲಭಿಸಿದ ದೂರಿನಂತೆ ಕ್ರಿಸ್ತು ಡಿ’ಸೋಜಾನ  ವಿರುದ್ದ ಪೋಕ್ಸೋ ಕೇಸು  ದಾಖಲಿ ಸಲಾಗಿತ್ತು. ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ಇಂದು ನ್ಯಾಯಾ ಲಯದಲ್ಲಿ ಹಾಜರುಪಡಿಸಲಾಗು ವುದೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page