ಬಸ್ನಲ್ಲಿ ಸಾಗಿಸುತ್ತಿದ್ದ ಮದ್ಯ ವಶ: ಓರ್ವ ಸೆರೆ
ಉಪ್ಪಳ: ಕರ್ನಾಟಕದಿಂದ ಕುಂಬಳೆ ಭಾಗಕ್ಕೆ ಬಸ್ನಲ್ಲಿ ಅನಧಿಕೃತವಾಗಿ ಸಾಗಿಸುತ್ತಿದ್ದ 12.960 ಲೀಟರ್ ವಿದೇಶ ಮದ್ಯವನ್ನು ಮಂಜೇಶ್ವರ ಅಬಕಾರಿ ಚೆಕ್ಪೋಸ್ಟ್ನಲ್ಲಿ ವಶಪಡಿಸ ಲಾಗಿದೆ. ಈ ಸಂಬಂಧ ಕೊಯಿ ಪ್ಪಾಡಿ ವಿಲ್ಲೇಜ್ ಕಂಚಿಕಟ್ಟೆಯ ನಾಗೇಶ್ ಎನ್. (೪೨) ಎಂಬಾತನನ್ನು ಬಂಧಿಸಲಾಗಿದೆ.
ನಿನ್ನೆ ರಾತ್ರಿ ೮.೧೦ರ ವೇಳೆ ಮಂಗಳೂರಿನಿಂದ ಬರುತ್ತಿದ್ದ ಕರ್ನಾಟಕ ರಾಜ್ಯ ಸಾರಿಗೆ ಬಸ್ನ್ನು ಅಬಕಾರಿ ಅಧಿಕಾರಿಗಳು ತಪಾಸಣೆ ನಡೆಸಿದಾಗ ಮದ್ಯ ಪತ್ತೆಯಾಗಿದೆ. ಮದ್ಯವನ್ನು ಬ್ಯಾಗ್ನೊಳಗೆ ತುಂಬಿಸಿಟ್ಟು ಸಾಗಿಸಲಾಗುತ್ತಿತ್ತು. ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಅಬಕಾರಿ ಪ್ರಿವೆಂಟಿವ್ ಆಫೀಸರ್ ಸಿ.ಕೆ.ವಿ.ಸುರೇಶ್, ಪ್ರಿವೆಂಟಿವ್ ಆಫೀಸರ್ ಗ್ರೇಡ್ ಜಿಜಿನ್ ಎಂ.ವಿ ಎಂಬಿವರಿದ್ದರು.