ಕಾಸರಗೋಡು: ಎಲ್ಡಿಎಫ್ ಅಭ್ಯರ್ಥಿ ಎಂ.ವಿ. ಬಾಲಕೃಷ್ಣನ್ರ ಹೆಸರಲ್ಲಿ ಬಿಡುಗಡೆ ಮಾಡಿದ ಈದುಲ್ ಫಿತೃ ಶುಭಾಶಯ ಕಾರ್ಡ್ ವಿವಾದಕ್ಕೆಡೆಯಾಗಿದೆ. ಕಪ್ಪು ಬಣ್ಣದೊಳಗೆ ಚಂದ್ರನ ಆಕೃತಿಗೆ ಹೊಂದಿಕೊಂಡು ಚುನಾವಣಾ ಚಿಹ್ನೆಯಾದ ಕತ್ತಿ ಸುತ್ತಿಗೆ ನಕ್ಷತ್ರವನ್ನು ಸೇರಿಸಿ ಕಾರ್ಡ್ ಮುದ್ರಿಸಿದ್ದು, ಇದು ಮಂಡಲದಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಲಾಗಿದೆ. ಇದು ವಿವಾದಕ್ಕೆಡೆಯಾಗಲಿದೆ ಎಂಬ ಸುದ್ದಿ ಕೇಳಿ ಬಂದಾಗಲೇ ನೇತಾರರ ಗಮನಕ್ಕೆ ಬಂದಿದೆ.
ಆದರೆ ಲೋಕಸಭಾ ಕ್ಷೇತ್ರದ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಡ್ ವಿತರಣೆ ಆರಂಭಗೊಂಡಿತ್ತು. ಬಳಿಕ ಕಾರ್ಡ್ ವಿವಾದಕ್ಕೆಡೆಯಾಗ ಲಿದೆ ಎಂದು ಅರಿವಿಗೆ ಬಂ ದೊಡನೆ ಈ ಕಾರ್ಡನ್ನು ಹಿಂತೆ ಗೆಯುವಂತೆ ನಿರ್ದೇಶ ನೀಡ ಲಾಗಿದೆ. ಎಡರಂಗ ಚುನಾ ವಣಾ ಸಮಿತಿ ಪರವಾಗಿ ಕಾರ್ಯ ದರ್ಶಿ ಕೆ.ಪಿ. ಸತೀಶ್ಚಂದ್ರನ್ರ ಹೆಸರಲ್ಲಿ ೨೫೦೦೦ ಕಾರ್ಡ್ ಗಳನ್ನು ಮುದ್ರಿಸಲಾಗಿದೆ ಎಂದು ಕಾರ್ಡ್ನಲ್ಲಿ ತಿಳಿಸಲಾಗಿದೆ.







