ಜ್ವರ: ರಾಜ್ಮೋಹನ್ ಉಣ್ಣಿತ್ತಾನ್ರಿಗೆ ವಿಶ್ರಾಂತಿ
ಕಾಸರಗೋಡು: ನಿನ್ನೆ ಮುಂಜಾನೆ ನಾಲ್ಕು ಗಂಟೆವರೆಗೆ ಸ್ಟ್ರೀಟ್ ವಾಕ್ ನಡೆಸಿದ ರಾಜ್ಮೋಹನ್ ಉಣ್ಣಿತ್ತಾನ್ರಿಗೆ ಜ್ವರದ ಹಿನ್ನೆಲೆಯಲ್ಲಿ ನಿನ್ನೆ, ಇಂದಿನ ಪರ್ಯಟನೆಯನ್ನು ಮೊಟಕುಗೊಳಿಸಿದ್ದಾರೆ. ನಿನ್ನೆ ಮುಂಜಾನೆವರೆಗೆ ಉಪ್ಪಳ ಬಜಾರ್, ಕಾಸರಗೋಡು ಹಳೆ ಬಸ್ ನಿಲ್ದಾಣ ಮಾರ್ಕೆಟ್ನಲ್ಲಿ ಸ್ಟ್ರೀಟ್ ವಾಕ್ ನಡೆಸಿದ್ದಾರೆ.
ಚೀಮೇನಿಯಲ್ಲಿ ತಾಯಿ ಹಾಗೂ ಮಕ್ಕಳು ಮೃತಪಟ್ಟ ಮನೆಗೆ, ಸಿಪಿಎಂ ಮುಖಂಡ ವಿ.ಪಿ.ಪಿ. ಮುಸ್ತಫರ ತಾಯಿಯ ನಿಧನ ವಾರ್ತೆ ತಿಳಿದು ಮನೆಗೆ ತಲುಪಿ ಸಂತಾಪ ಸೂಚಿಸಿದರು. ಬಳಿಕ ಜ್ವರದ ಹಿನ್ನೆಲೆಯಲ್ಲಿ ಇಂದಿನವರೆಗೆ ಪರ್ಯಟನೆ ನಿಲ್ಲಿಸಿದ್ದಾರೆ.