ಪ್ರಧಾನ ಕೇಂದ್ರ ಚೀನ, ಪಾಕಿಸ್ತಾನ: ‘ಅಡಗು ಯುದ್ಧ’ ತಡೆಗಟ್ಟಲು ಸೈಬರ್ ಕಮಾಂಡೋಗಳು ರಂಗಕ್ಕೆ

ಕಾಸರಗೋಡು: ಆನ್‌ಲೈನ್ ಗಳಿಂದ ನಡೆಸಲಾಗು ತ್ತಿರುವ ಅಡಗು ಯುದ್ಧಗಳನ್ನು ತಡೆಗಟ್ಟಲು ಸೈಬರ್ ಕಮಾಂಡೋಗಳನ್ನು ಕೇಂದ್ರ ಸರಕಾರ ರಂಗಕ್ಕಿಳಿಸಿದೆ. ಆನ್‌ಲೈನ್ ಮೂಲಕ ಕೋಟಿಗಟ್ಟಲೆ ರೂ.ಗಳ ವಂಚನೆ ನಡೆಸುವ ಹಲವು ಸೈಬರ್ ವಂಚನಾ ಕೇಂದ್ರಗಳು ಪಾಕಿಸ್ತಾನ ಮತ್ತು ಚೀನಾ ದಲ್ಲಿ ಕಾರ್ಯವೆಸಗುತ್ತಿರುವ ಬಗ್ಗೆ ಕೇಂದ್ರ ತನಿಖಾ ತಂಡಕ್ಕೆ ಸ್ಪಷ್ಟ ಮಾಹಿತಿ ಲಭಿಸಿದೆ. ಇದು ಭಾರತ ದೊಳಗೆ ಶತ್ರುದೇಶಗಳು ನಡೆಸುತ್ತಿರುವ ಒಂದು ರೀತಿಯ ಅಡಗು ಯುದ್ಧವಾಗಿದೆ.

ಆನ್‌ಲೈನ್ ಮೂಲಕ ಸಾಲ ನೀಡುವಿಕೆ ಇತ್ಯಾದಿ ಆಕರ್ಷಕ ಜಾಹೀರಾತುಗಳನ್ನು ನೀಡಿ ಜನರನ್ನು ಮರುಳುಗೊಳಿಸಿ ಅಂತಹ ಜಾಲಕ್ಕೆ ಬಿದ್ದ ಅದೆಷ್ಟೋ ಮಂದಿ ಲಕ್ಷಾಂತರ ರೂ. ಕಳೆದುಕೊಂಡಿದ್ದಾರೆ. ಇಂತಹ ಸೈಬರ್ ವಂಚಕರು ಹೆಚ್ಚಾಗಿ  ಚೀನಾವನ್ನು ಕೇಂದ್ರೀಕರಿಸಿ ಕಾರ್ಯವೆಸಗುತ್ತಿದ್ದಾರೆ. ಇಂತಹ ಸೈಬರ್ ದಾಳಿಯನ್ನು ತಡೆಗಟ್ಟಲು ದೇಶದ ಎಲ್ಲಾ ರಾಜ್ಯ ಪೊಲೀಸ್ ಪಡೆಗಳೂ ಬಿಟೆಕ್, ಎಂ.ಎಸ್ಸಿ ಪದವೀಧರರಾದ ಪೊಲೀಸರಿಗೆ  ಸೈಬರ್ ವಂಚನೆಯನ್ನು ಪತ್ತೆಹಚ್ಚುವ ರೀತಿಯ ನುರಿತ ತರಬೇತಿ ನೀಡಿ, ಅವರನ್ನು ಒಳಪಡಿಸಿ ಎಲ್ಲಾ ರಾಜ್ಯಗಳಲ್ಲಿ ಸೈಬರ್ ಕಮಾಂಡೋಗಳನ್ನು ಈಗ ನೇಮಿಸಲಾಗುತ್ತಿದೆ.

ಇದಕ್ಕಾಗಿ ಕೇರಳದಿಂದ ೧೦ ಮಂದಿ ಪೊಲೀಸರನ್ನು ಈಗಾಗಲೇ ಆರಿಸಲಾಗಿದೆ. ಈ ಯೋಜನೆ ಪ್ರಕಾರ ಮೊದಲ ಹಂತದಲ್ಲಿ ೩೦೦೦ ಮಂದಿಯನ್ನು ಸೈಬರ್ ಕಮಾಂಡೋಗಳನ್ನು ನೇಮಿಸಲು ಕೇಂದ್ರ ಸರಕಾರ ತೀರ್ಮಾನಿಸಿದೆ.

ಸೈಬರ್ ವಂಚನೆ ಬಗ್ಗೆ ಮಹಾರಾಷ್ಟ್ರದಲ್ಲಿ ಪ್ರತಿದಿನ ೫೦೦ರಷ್ಟು ದೂರುಗಳು ಪೊಲೀಸರಿಗೆ ಲಭಿಸುತ್ತಿದೆ. ಕೇರಳದಲ್ಲಿ ಇಂತಹ ೫೦ರಷ್ಟು ದೂರುಗಳು ದೈನಂದಿನ ಲಭಿಸುತ್ತಿದೆ. ಭಾರತದಲ್ಲಿ ಪ್ರತೀ ಗಂಟೆಗೆ ತಲಾ ೧೦,೦೦೦ದಷ್ಟು ಸೈಬರ್ ದಾಳಿಗಳು ಉಂಟಾಗುತ್ತಿದೆ ಎಂದು ಲೆಕ್ಕಹಾಕಲಾಗಿದೆ.

Leave a Reply

Your email address will not be published. Required fields are marked *

You cannot copy content of this page