ಸಲ್ಮಾನ್ಖಾನ್ ಮನೆ ಮೇಲೆ ಗುಂಡಿನ ದಾಳಿ: ಮೂರು ಮಂದಿ ಕಸ್ಟಡಿಯಲ್ಲಿ
ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ರ ಮನೆ ಮೇಲೆ ಗುಂಡು ಹಾರಿಸಿದ ಘಟನೆಗೆ ಸಂಬಂಧಿಸಿ ಮೂರು ಮಂದಿಯನ್ನು ಮುಂಬೈ ಪೊಲೀಸರು ಕಸ್ಟಡಿಗೆ ತೆಗೆ ದುಕೊಂಡಿದ್ದಾರೆ. ಗುಂಡು ಹಾರಾಟನಡೆಸಿದವರಿಗೆ ವಾಹನ ಮತ್ತಿತರ ಸಹಾಯವೊದಗಿಸಿದವರು ಕಸ್ಟಡಿಯಲ್ಲಿರುವುದಾಗಿ ಹೇಳಲಾಗುತ್ತಿದೆ. ಆಕ್ರಮಣದ ಹಿಂದೆ ಲೋರೆನ್ಸ್ ಬೀಪ್ಲೋಯ್ ತಂಡ ಕಾರ್ಯಾಚರಿಸಿರುವುದಾಗಿ ಪೊಲೀಸರು ಅಂದಾಜಿಸಿದ್ದಾರೆ. ಗುಂಡು ಹಾರಿಸಿದ ತಂಡದಲ್ಲಿ ರಾಜಸ್ತಾನ ನಿವಾಸಿ ವಿಶಾಲ್ ಹಾಗೂ ಗುರುತು ಹಚ್ಚಲಾಗದ ಇನ್ನೋರ್ವನಿದ್ದುದಾಗಿ ಪೊಲೀಸರಿಗೆ ಮಾಹಿತಿ ಲಭಿಸಿದೆ. ಘಟನೆಯ ತಕ್ಷಣ ಆರೋಪಿಗಳು ಮುಂಬೈಯಿಂದ ತಲೆಮರೆಸಿಕೊಂಡಿದ್ದಾರೆನ್ನಲಾಗಿದೆ. ಆರೋಪಿಗಳು ಸಂಚರಿಸಿದ ಬೈಕ್ ಪತ್ತೆಹಚ್ಚುವ ಮೊದಲು ಆರೋಪಿಗಳು ಸಂಚರಿಸುತ್ತಿರುವ ಸಿಸಿ ಟಿವಿ ದೃಶಗಳನ್ನು ಬಿಡುಗಡೆಗೊಳಿಸಿದರು.
ಬಾಂದ್ರದಲ್ಲಿರುವ ಸಲ್ಮಾನ್ ಖಾನ್ರ ಮನೆಯಾದ ಗಾಲೆಕ್ಸಿ ಅಪಾರ್ಟ್ಮೆಂಟ್ನ ಮೇಲೆ ನಿನ್ನೆ ಮುಂಜಾನೆ ೫ ಗಂಟೆ ವೇಳೆ ದಾಳಿ ನಡೆದಿದೆ. ಬೈಕ್ನಲ್ಲಿ ತಲುಪಿದ ದುಷ್ಕರ್ಮಿಗಳು ಮೂರು ಸುತ್ತು ಗಂಡು ಹಾರಿಸಿದ್ದರು. ಅಪಾರ್ಟ್ಮೆಂಟ್ನ ಗೋಡೆಗೆ ಗುಂಡು ತಾಗಿತ್ತು. ವಿಷಯ ತಿಳಿದು ತಲುಪಿದ ಪೊಲೀಸರು ನಡೆಸಿದ ತನಿಖೆ ವೇಳೆ ಗೋಡೆಯಿಂದ ಗುಂಡು ಪತ್ತೆಹಚ್ಚಿದ್ದಾರೆ. ಆರೋಪಿಗಳು ವಿದೇಶಿ ನಿರ್ಮಿತ ಬಂದೂಕು ಬಳಸಿ ಗುಂಡು ಹಾರಿಸಿರುವುದಾಗಿ ದೃಢೀಕರಿಸಲಾಗಿದೆ.
ದಾಳಿಯ ಹೊಣೆಗಾರಿಕೆಯನ್ನು ಕುಖ್ಯಾತ ಗೂಂಡ ನೇತಾರ ಲೋರೆನ್ಸ್ ಬಿಪ್ಲೋಯ್ನ ಸಹೋದರ ವಹಿಸಿ ಕೊಂಡಿದ್ದಾನೆನ್ನಲಾಗಿದೆ. ಈ ಹಿಂದೆ ಯೂ ಇದೇ ತಂಡದಿಂದ ಸಲ್ಮಾನ್ ಖಾನ್ಗೆ ಬೆದರಿಕೆಯಿ ತ್ತೆನ್ನಲಾಗಿದೆ.