ಲೋಕಸಭಾ ಚುನಾವಣೆ: ರಾಜ್ಯದಲ್ಲಿ 30,238 ಮತಯಂತ್ರಗಳ ಬಳಕೆ
ಕಾಸರಗೋಡು: ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಒಟ್ಟು 30,238 ಇಲೆಕ್ಟ್ರೋನಿಕ್ ಮತಯಂತ್ರ ಗಳನ್ನು ಉಪಯೋಗಿಸಲಾಗುವುದೆಂದು ಪ್ರಧಾನ ಚುನಾವಣಾ ಆಯೋಗದ ಅಧಿಕಾರಿ ಸಂಜಯ್ ಕೌಲ್ ತಿಳಿಸಿ ದ್ದಾರೆ. ಎಪ್ರಿಲ್ 26ರಂದು ನಡೆಯುವ ಮತದಾನದಲ್ಲಿ ರಾಜ್ಯದ 20 ಕ್ಷೇತ್ರ ಗಳಲ್ಲಿನ 25,231 ಮತಗಟ್ಟೆಗಳಲ್ಲಾಗಿ 30,238 ಬ್ಯಾಲೆಟ್ ಘಟಕಗಳು ಹಾಗೂ 30,238 ಕಂಟ್ರೋಲ್ ಘಟಕಗಳು, 32,698 ವಿವಿಪ್ಯಾಟ್ ಯಂತ್ರಗಳನ್ನು ಉಪಯೋಗಿಸ ಲಾಗುತ್ತದೆ.
ಯಾವುದಾದರೂ ಉಪ ಕರಣಕ್ಕೆ ಹಾನಿಯುಂಟಾದರೆ ಅದಕ್ಕೆ ಬದಲಾಗಿ ಉಪಯೋಗಿಸುವ ಉಪಕರಣಗಳು ಇದರಲ್ಲಿ ಒಳಗೊಂಡಿದೆ. ಪ್ರಸ್ತುತ ಈ ಮತಯಂತ್ರಗಳು ಅಸಿಸ್ಟೆಂಟ್ ರಿಟರ್ನಿಂಗ್ ಆಫೀಸರ್ರ ಕಸ್ಟಡಿಯಲ್ಲಿ ಭದ್ರತಾ ಕೊಠಡಿಯಲ್ಲಿದೆ.