ನ್ಯಾಯವಾದಿ ಸುಹಾಸ್ ಬಲಿದಾನ ದಿನಾಚರಣೆ
ಕಾಸರಗೋಡು: ಬಿಎಂಎಸ್ ಜಿಲ್ಲಾ ಉಪಾಧ್ಯಕ್ಷರಾಗಿದ್ದ ನ್ಯಾಯ ವಾದಿ ಸುಹಾಸ್ ಅವರ ಬಲಿದಾನ ದಿನಾಚರಣೆಯನ್ನು ಇಂದು ಬೆಳಿಗ್ಗೆ ಕಾಸರಗೋಡು ಬಿಎಂಎಸ್ ಜಿಲ್ಲಾ ಕಚೇರಿ ಪರಿಸರದಲ್ಲಿ ನಡೆಸಲಾಯಿತು. ಆರ್ಎಸ್ಎಸ್ ಜಿಲ್ಲಾ ಕಾರ್ಯವಾಹ್ ಪವಿತ್ರನ್ ಕೆ.ಕೆ. ಪುರ, ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು ಮುಖ್ಯ ಭಾಷಣ ಮಾಡಿದರು. ಬಿಎಂಎಸ್ ರಾಜ್ಯ ಉಪಾಧ್ಯಕ್ಷ ನ್ಯಾಯವಾದಿ ಪಿ. ಮುರಳೀಧರನ್, ಜಿಲ್ಲಾ ಅಧ್ಯಕ್ಷ ಉಪೇಂದ್ರನ್ ಕೋಟೆಕಣಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ರವೀಶ ತಂತ್ರಿ ಕುಂಟಾರು, ಸಂಘ ಪರಿವಾರ ಪ್ರಮುಖರಾದ ಪಿ. ರಮೇಶ್, ದಿನೇಶ್, ಹರೀಶ್, ಲೀಲಾ ಕೃಷ್ಣನ್, ರಿಜೇಶ್ ಮೊದಲಾದವರು ಉಪಸ್ಥಿತರಿದ್ದರು.