ಮಂಜೇಶ್ವರ ರಾ. ಹೆದ್ದಾರಿ ಕ್ರಿಯಾ ಸಮಿತಿ ವತಿಯಿಂದ ಬೃಹತ್ ಪ್ರತಿಭಟನಾ ಜಾಥಾ

ಮಂಜೇಶ್ವರ: ಮಂಜೇಶ್ವರ ರಾಗಂ ಜಂಕ್ಷನ್‌ನಲ್ಲಿ ರಸ್ತೆ ದಾಟಲು ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲು ಮುಂದಾಗದ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿರ್ಲ್ಯಕ್ಷವನ್ನು ವಿರೋಧಿಸಿ ಕಳೆದ ಎರಡು ತಿಂಗಳಿ ನಿಂದ ನಡೆಯುತ್ತಿರುವ ಅನಿರ್ಧಿಷ್ಟಾ ವಧಿ ಮುಷ್ಕರದಂಗವಾಗಿ ನಿನೆÀ್ನ ಉದ್ಯಾವರದಿಂದ ಮಂಜೇಶ್ವರ ರಾಗಂ ಜಂಕ್ಷನ್ ತನಕ ಬೃಹತ್ ಜನ ಪರ ಪ್ರತಿಭಟನಾ ಮೆರವಣಿಗೆ ನಡೆಯಿತು. ನೂತನ ಷಟ್ಪಥ ರಾ.ಹೆದ್ದಾರಿಯಲ್ಲಿ ಹಮ್ಮಿಕೊಂಡ ಪ್ರತಿಭಟನಾ ಜಾಥಾಕ್ಕೆ ಅತ್ತಾವುಲ್ಲ ತಂಙಳ್ ಚಾಲನೆ ನೀಡಿದರು. ಝಕರಿಯ್ಯ ಅಧ್ಯಕ್ಷತೆ ವಹಿಸಿದರು. ಪ್ರತಿಭಟನಾ ಮೆರವಣಿಗೆಯಲ್ಲಿ ಮಹಿಳೆಯರು, ವೃದ್ಧರು, ಭಿನ್ನಚೇತನರು ಯುವಕರು ಸೇರಿದಂತೆ ಸಹಸ್ರಾರು ಮಂದಿ ಪಾಲ್ಗೊಂಡರು.ಈ ಸಂದರ್ಭ ರಾಜ್ ಬೆಳ್ಚಾಡ, ಸಂಜೀವ ಶೆಟ್ಟಿ, ಮಂಜೇಶ್ವರ ಪಂಚಾಯತ್ ಅಧ್ಯಕ್ಷೆ ಜೀನ್ ಲವಿನಾ ಮೊಂತೇರೋ, ಹಮೀದ್ ಸೇರಿದಂತೆ ಹಲವು ಪ್ರಮುಖರು ಪಾಲ್ಗೊಂಡರು. ಷಟ್ಪಥ ರಸ್ತೆ ಕಾಮಗಾರಿ ಆರಂಭವಾಗುವ ಮುನ್ನವೇ ಜನರ ಬೇಡಿಕೆಗೆ ಕಿಂಚತ್ತೂ ಬೆಲೆ ಕಲ್ಪಿಸದ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ನಾಡಿನ ಜನತೆಯ ಪ್ರತಿಭಟನೆಗೆ ಕಾರಣವಾಗಿದ್ದು ರಾಜಕೀಯ ಜಾತಿ ಮತ ಭೇಧವನ್ನು ಮರೆತು ನಡೆದ ಬೃಹತ್ ಸಮಾವೇಶ ಇದಕ್ಕೆ ಸಾಕ್ಷಿಯಾಯಿತು.
ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇಲ್ಲ ಸಲ್ಲದ ಕಾರಣ ನೀಡಿ ಲೋಪ ಮರೆಮಾಚಲು ಯತ್ನಿಸುತ್ತಿರುವುದರ ವಿರುದ್ಧ ಪ್ರತಿಭಟನಾ ಜಾಥಾದಲ್ಲಿ ಜನಪ್ರತಿನಿದಿ üಗಳ ಹಾಗೂ ಅಧಿಕಾರಿಗಳ ವಿರುದ್ಧ ವ್ಯಾಪಕ ಆಕ್ರೋಶ ಮೊಳಗಿತು. ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಶೇ.100ರಷ್ಟು ಪೂರ್ಣಗೊಂಡ ಪ್ರದೇಶಗಳಲ್ಲಿ ಅಂಡರ್ ಪಾಸ್ ನೀಡಲು ಅಧಿಕಾರಿಗಳಿಗೆ ಸಾಧ್ಯವಾಗಿರುವಾಗ ಮಂಜೇಶ್ವರ ರಾಗಂ ಜಂಕ್ಷನ್‌ನಲ್ಲಿ ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದರ ವಿರುದ್ಧ ಪ್ರತಿಭಟನಾ ನಿರತರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಯಿತು. ರಾಗಂ ಜಂಕ್ಷನ್‌ನಲ್ಲಿ ಅಲ್ಪ ಸಮಯ ರಾ.ಹೆದ್ದಾರಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು. ಹೆದ್ದಾರಿ ಅಭಿವೃದ್ಧಿ ಸಮಿತಿಯ ಅಶ್ರಫ್ ಬಡಾಜೆ, ಯಾದವ ಬಡಾಜೆ, ಎಸ್ ಎಂ ಬಶೀರ್, ಜಬ್ಬಾರ್ ಬಹರೈನ್, ಹಸೈನಾರ್, ಹನೀಫ ಸುರಬಿ ನೇತೃತ್ವ ನೀಡಿದರು.

Leave a Reply

Your email address will not be published. Required fields are marked *

You cannot copy content of this page