ಬಂಗ್ರಮಂಜೇಶ್ವರ ಕ್ಷೇತ್ರದಲ್ಲಿ ವರ್ಷಾವಧಿ ಪ್ರತಿಷ್ಠಾ ಮಹೋತ್ಸವ ನಾಳೆಯಿಂದ
ಮಂಜೇಶ್ವರ: ಬಂಗ್ರಮAಜೇಶ್ವರ ಶ್ರೀ ಕಾಳಿಕಾಪರಮೇಶ್ವರಿ ದೇವಸ್ಥಾನ ದಲ್ಲಿ ವರ್ಷಾವಧಿ ಪ್ರತಿಷ್ಠಾ ಮಹೋ ತ್ಸವ ನಾಳೆಯಿಂದ ಎ.27ರ ತನಕ ವಿವಿಧ ಕಾರ್ಯಕ್ರಮಗ ಳೊಂದಿಗೆ ನಡೆಯಲಿದೆ. ನಾಳೆ ಸಂಜೆ ದೇವತಾ ಪ್ರಾರ್ಥನೆ, ತೋರಣ ಪ್ರತಿಷ್ಠೆ, ತಂತ್ರಿ ವರಣ ಸಹಿತ ವಿವಿಧ ಕಾರ್ಯಕ್ರಮ ಗಳು, 26ರಂದು ಪೂರ್ವಾಹ್ನ ಶ್ರೀ ಮಾತೆಗೆ ಪಂಚಾಮೃತ ಸಹಿತ 108 ಸೀಯಾಳ ಅಭಿಷೇಕ, ಕಲಾತತ್ವ ಪ್ರಧಾನ ಹೋಮಾದಿಗಳು, ಪೂರ್ಣಾಹುತಿ, ಕುಂಭಾಭಿಷೇಕ, ಅಲಂಕಾರ, ಮಹಾಪೂಜೆ, ಪಲ್ಲಪೂಜೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಮಧ್ಯಾಹ್ನ 1ರಿಂದ ಕೆ.ಯಂ. ಗುರು ಕಿರಣ್ ಆಚಾರ್ಯ ಕೆರೆಮನೆ ಕಾಸರಗೋಡು ಬಳಿಕ ಮಡಿಕೇರಿ ಕೇಶವ ಆಚಾರ್ಯ ಇವರಿಂದ ಕೊಳಲು ವಾದನ, ಸಂಜೆ 5ಕ್ಕೆ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮಿಗಳವರಿಗೆ ಪೂರ್ಣಕುಂಭ ಸ್ವಾಗತ, ಆಶೀರ್ವಚನ, ರಾತ್ರಿ 7.30ಕ್ಕೆ ರಂಗಪೂಜೆ, ಗುಳಿಗ ದೈವಕ್ಕೆ ತಂಬಿಲ, ಪಲ್ಲಕ್ಕಿ ಉತ್ಸವ, ಶ್ರೀ ಆದಿಕ್ಷೇತ್ರಕ್ಕೆ ಭೇಟಿ, ಅಷ್ಟಾವಧಾನ, ಅವಭೃತ, ಶ್ರೀ ದೇವರ ಆಲಯ ಪ್ರವೇಶ, ಬ್ರಹ್ಮಾರ್ಪಣೆ, ಫಲ ಮಂತ್ರಾಕ್ಷತೆ, 27ರಂದು ಪೂರ್ವಾಹ್ನ ಸಂಪ್ರೋಕ್ಷಣೆ ನಡೆಯಲಿದೆ. ಉತ್ಸವದ ದಿನಗಳಲ್ಲಿ ಓಜ ಸಾಹಿತ್ಯ ಕೂಟ ಹಾಗೂ ಶ್ರೀ ಕಾಳಿಕಾಪರಮೇಶ್ವರೀ ವಿಶ್ವಕರ್ಮ ಮಹಿಳಾ ಸಂಘದ ವತಿಯಿಂದ ಭಜನಾ ಕಾರ್ಯಕ್ರಮ ಹಾಗೂ ದೇವೀ ಪಾರಾಯಣ ನಡೆಯಲಿದೆ.