ಪದ್ಮಜಾರಿಗೆ ಉಣ್ಣಿತ್ತಾನ್‌ರ ತಾಕೀತು

ಕಾಸರಗೋಡು: ಲೀಡರ್ ಕೆ. ಕರುಣಾಕರನ್‌ರ ಪುತ್ರಿ ಇತ್ತೀಚೆಗೆ ಬಿಜೆಪಿಗೆ ಸೇರಿದ ಪದ್ಮಜಾ ವೇಣುಗೋಪಾಲ್‌ರಿಗೆ ಐಕ್ಯರಂಗದ ಅಭ್ಯರ್ಥಿ ರಾಜ್ ಮೋಹನ್ ಉಣ್ಣಿತ್ತಾನ್ ತಾಕೀ ತು ನೀಡಿದ್ದಾರೆ. ನಾನು ಬಿಜೆಪಿಗೆ ಹೋಗುವೆನೆಂಬ ಪದ್ಮಜಾರ ಅಭಿಪ್ರಾಯವನ್ನು ಅಸಡ್ಡೆಯಿಂದ ತಳ್ಳುವುದಾಗಿಯೂ,  ನನ್ನ ತಂದೆ ಕೆ. ಕರುಣಾಕರನ್ ಅಲ್ಲವೆಂದೂ ಉಣ್ಣಿತ್ತಾನ್ ಆಕ್ರೋಶದಿಂದ ನುಡಿದಿದ್ದಾರೆ. ಸಾಯುವವರೆಗೆ ನಾನು ಕಾಂಗ್ರೆಸ್‌ನವನಾಗಿ ರುತ್ತೇನೆ. ಪದ್ಮಜಾ ನನ್ನಿಂದ ಇನ್ನಷ್ಟು ಹೆಚ್ಚು ಹೇಳಿಸಬಾರ ದೆಂದು ರಾಜ್‌ಮೋಹನ್ ಉಣ್ಣಿತ್ತಾನ್ ಎಚ್ಚರಿಕೆ ನೀಡಿ ದ್ದಾರೆ. ನಾನು ಹೇಳಲು ಆರಂ ಭಿಸಿದರೆ ಪದ್ಮಜಾರಿಗೆ ಹೊರಗೆ ಇಳಿದು ಸಂಚರಿಸಲು ಸಾಧ್ಯವಾಗ ದೆಂದು ಅವರು ತಿಳಿಸಿದ್ದಾರೆ.

You cannot copy contents of this page