ಇಲಿ ವಿಷ ಸೇವಿಸಿದ ಎಸ್‌ಐ ಸ್ಥಿತಿ ಚಿಂತಾಜನಕ: ಕೊಚ್ಚಿಯ ಆಸ್ಪತ್ರೆಗೆ ಸ್ಥಳಾಂತರ
ಕಾಸರಗೋಡು: ಇಲಿವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿರುವ ಎಸ್‌ಐಯನ್ನು ಕೊಚ್ಚಿಯ ಅಮೃತ ಆಸ್ಪತ್ರೆಗೆ ಸಾಗಿಸಲಾಗಿದೆ.
ಬೇಡಗಂ ಪೊಲೀಸ್ ಠಾಣೆಯ ಗ್ರೇಡ್ ಎಸ್‌ಐ ವಿಜಯನ್‌ರನ್ನು ಮಂಗಳೂರಿನ ಆಸ್ಪತ್ರೆಯಿಂದ ಕೊಚ್ಚಿ ಯ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಮೊನ್ನೆ ಬೆಳಿಗ್ಗೆ ಎಸ್‌ಐ ವಿಜಯನ್ ಕ್ವಾರ್ಟರ್ಸ್‌ನಲ್ಲಿ ಇಲಿ ವಿಷ ಸೇವಿಸಿದ್ದರು. ಆ ಬಗ್ಗೆ ಅವರೇ ಸಹೋದ್ಯೋಗಿಗಳಲ್ಲಿ ತಿಳಿಸಿದ್ದರು. ಕೂಡಲೇ ಕಾಸರಗೋಡಿನ ಆಸ್ಪತೆಗೆ ತಲುಪಿಸಿ ಬಳಿಕ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ತೀವ್ರ ಮಾನಸಿಕ ಒತ್ತಡವೇ ವಿಷ ಸೇವಿಸಲು ಕಾರಣವೆಂದು ವಿಜಯನ್ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆದರೆ ಆ ಒತ್ತಡವೇನೆಂದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಮಂಗಳೂರಿನ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಮುಂದುವರಿಯುತ್ತಿದ್ದಂತೆ ವಿಜಯನ್‌ರ ಆರೋಗ್ಯ ಸ್ಥಿತಿ ಗಂಭೀ ರಾವಸ್ಥೆಗೆ ತಲುಪಿದೆ. ಇದರಿಂದಾಗಿ ಕೊಚ್ಚಿಯ ಆಸ್ಪತ್ರೆಗೆ ತಲುಪಿಸಲಾಗಿದೆ.
ಲೋಕಸಭಾ ಚುನಾವಣಾ ದಿನದಂದು ಬೇಡಗಂನಲ್ಲಿ ಉಂಟಾದ ವಿವಾದಕ್ಕೆ ಸಂಬಂಧಿಸಿ ದಾಖಲಾದ ಪ್ರಕರಣದ ತನಿಖೆಯ ಹೊಣೆಗಾರಿಕೆ ಎಸ್‌ಐಗೆ ವಹಿಸಲಾಗಿತ್ತು. ಈ ಕುರಿತಾಗಿ ಮಾನಸಿಕ ಒತ್ತಡದಿಂದ ಅವರು ವಿಷ ಸೇವಿಸಿರಬಹುದೆಂದು ಸಂಶಯಿಸ ಲಾಗುತ್ತಿದೆ. ಆದರೆ ಈ ವಿಷಯದಲ್ಲಿ ಒತ್ತಡ ಹೇರಿದವರು ಯಾರೆಂಬ ಬಗ್ಗೆ ಇನ್ನಷ್ಟೇ ತಿಳಿಯಬೇಕಾಗಿದೆ.