ಬದಿಯಡ್ಕ: ಬಿಜೆಪಿಗೆ ರಾಜೀ ನಾಮೆ ನೀಡಿ ಸಿಪಿಎಂಗೆ ಸೇರ್ಪ ಡೆಗೊಂಡ ದ್ವೇಷದಿಂದ ಯುವ ಕನ ಮೇಲೆ ಹಲ್ಲೆಗೈದ ಬಗ್ಗೆ ದೂರ ಲಾಗಿದೆ. ಪೈಕ ಅರ್ಲಡ್ಕದ ಕೃಷ್ಣ (೪೮)ಎಂಬವರಿಗೆ ಹಲ್ಲೆಗೈಯ್ಯ ಲಾಗಿದೆ. ಗಾಯಗೊಂಡ ಇವರನ್ನು ಚೆಂಗಳದ ನಾಯ ನಾರ್ ಆಸ್ಪತ್ರೆಯಲ್ಲಿ ದಾಖಲಿಸ ಲಾಗಿದೆ. ನಿನ್ನೆ ಈ ಘಟನೆ ನಡೆದಿದೆ. ಕೃಷ್ಣರ ದೂರಿನಂತೆ ಬಿಜೆಪಿ ಕಾರ್ಯಕರ್ತ ರಾದ ಗಿರೀಶ್, ವಿಶ್ವನಾಥ ಎಂಬಿವರ ವಿರುದ್ಧ ಬದಿಯಡ್ಕ ಪೊಲೀಸರು ನರಹತ್ಯಾಯತ್ನ ಕೇಸು ದಾಖಲಿಸಿಕೊಂಡಿದ್ದಾರೆ.
