ಕೇರಳದಲ್ಲಿ ಬಹುಸಂಖ್ಯಾತರ ದೇವಾಲಯಗಳು, ಆರಾಧನಾ ಕೇಂದ್ರಗಳ ವಿರುದ್ಧ ಭಾರೀ ಪಿತೂರಿ ನಡೆಯುತ್ತಿದೆ- ರವೀಶ ತಂತ್ರಿ ಕುಂಟಾರು

ಜೋಡುಕಲ್ಲು: ಕೇರಳದಲ್ಲಿ ಬಹುಸಂಖ್ಯಾತ ಸಮುದಾಯದ ದೇವಾಲಯಗಳು ಹಾಗೂ ಆರಾಧನಾ ಕೇಂದ್ರಗಳ ವಿರುದ್ಧ ದೊಡ್ಡ ಮಟ್ಟದ ಪಿತೂರಿ ನಡೆಯುತ್ತಿದೆ. ಆಡಳಿತ ಪಕ್ಷದ ಹಿತಾಸಕ್ತಿಗೆ ತಕ್ಕಂತೆ ಬಹುಸಂಖ್ಯಾತ ಸಮುದಾಯದ ವಿರುದ್ಧ ಮಾತ್ರವೇ ಕ್ರಮ ಕೈಗೊಳ್ಳಲು ರಾಜ್ಯ ಮತ್ತು ಜಿಲ್ಲಾಡಳಿತಗಳು ಅತಿಯಾದ ಆತುರ ತೋರುತ್ತಿವೆ ಎಂದು ಜೋಡುಕಲ್ಲು ಶ್ರೀ ಗಣೇಶ ಮಂದಿರ ಸಂರಕ್ಷಣಾ ಕ್ರಿಯಾ ಸಮಿತಿಯ ಅಧ್ಯಕ್ಷ ರವೀಶ ತಂತ್ರಿ ಕುಂಟಾರು ಹೇಳಿದರು.
ಕೇಶವ ಶಿಶು ಮಂದಿರದಲ್ಲಿ ನಿನ್ನೆ ಸಂಜೆ ನಡೆದ ಭಕ್ತಾದಿಗಳ, ಪ್ರತಿನಿಧಿಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರ ಸಭೆಯಲ್ಲಿ ಅವರು ಮಾತ ನಾಡುತ್ತಿದ್ದರು. ಸಾರ್ವಜನಿಕ ಸ್ಥಳಗ¼ Àಲ್ಲಿನ ಒತ್ತುವರಿಗಳನ್ನು ತೆರವುಗೊಳಿ ಸಲು ಹೈಕೋರ್ಟ್ನ ಆದೇಶವು ಹಿಂದೆಯೇ ಇದ್ದರೂ, ಆ ಆದೇಶದ ನೆಪವೊಡ್ಡಿ ಕಳೆದ ಆರು ದಶಕಗಳಿಂದ ಬಹುಸಂಖ್ಯಾತ ಸಮುದಾಯವು ಪೂಜೆ ಸಲ್ಲಿಸಿಕೊಂಡು ಬರುತ್ತಿರುವ ಜೋಡುಕಲ್ಲಿನ ಶ್ರೀ ಗಣೇಶ ಮಂದಿರದ ನಿರ್ಮಾಣವನ್ನು ಮಾತ್ರ ಬಲಪ್ರಯೋ ಗದ ಮೂಲಕ ತೆರವುಗೊಳಿಸಲು ರಾಜ್ಯ-ಜಿಲ್ಲಾಡಳಿತ ಹಾಗೂ ಲೋಕೋಪಯೋಗಿ ಇಲಾಖೆ ನಡೆಸುತ್ತಿರುವ ಪ್ರಯತ್ನ ಅತ್ಯಂತ ಖಂಡನೀಯ ಎಂದು ಅವರು ಹೇಳಿದರು.. ಕಾಸರಗೋಡು ಜಿಲ್ಲೆಯಲ್ಲಿ ಕೋಮು ಸೌಹಾರ್ದತೆ ಮತ್ತು ಕಾನೂನಿನ ನಿಯಮಗಳನ್ನು ಕಾಪಾಡುವ ಹೊಣೆಗಾರಿಕೆ ಕೇವಲ ಬಹುಸಂಖ್ಯಾತ ಸಮುದಾಯದ ಕರ್ತವ್ಯ ಎಂಬಂತಾಗಿದೆ. ಶ್ರೀ ಗಣೇಶ ಮಂದಿರವನ್ನು ಧ್ವಂಸಗೊಳಿಸುವುದೇ ಮುಸ್ಲಿಂಲೀಗ್‌ನ ಹಿತಾಸಕ್ತಿಯಾಗಿದ್ದು, ಧರ್ಮವೇ ದೊಡ್ಡದು ಎಂದು ಘೋಷಿಸಿದ ನಾಯಕರ ಆಡಳಿತದಲ್ಲಿ ಬಹುಸಂಖ್ಯಾತ ಸಮುದಾಯಕ್ಕೆ ನ್ಯಾಯ ಸಿಗುತ್ತದೆಯೆಂದು ನಿರೀಕ್ಷಿಸಲು ಸಾಧ್ಯವಿಲ್ಲ. ಶ್ರೀ ಗಣೇಶ ಮಂದಿರವನ್ನು ಸಂರಕ್ಷಿಸಲೇಬೇಕು ಎಂಬ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಿದ ಅವರು ನ್ಯಾಯಾಲಯದ ತೀರ್ಪುಗಳನ್ನು ಏಕಪಕ್ಷೀಯವಾಗಿ ಜ್ಯಾರಿಗೊಳಿಸಬಾರದು ಎಂದೂ ಆಗ್ರಹಿಸಿದರು. ಸಭೆಯಲ್ಲಿ ಆರ್‌ಎಸ್‌ಎಸ್ ಕಾಸರಗೋಡು ಸಂಘಜಿಲ್ಲಾ ಸಂಘಚಾಲಕ್ ಪ್ರಭಾಕರನ್ ಮಾಸ್ಟರ್, ಹಿಂದೂ ಐಕ್ಯವೇದಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಪಿ. ಹರಿದಾಸ್, ಕಣ್ಣೂರು ವಿಭಾಗ ಕಾರ್ಯವಾಹ ಲೋಕೇಶ್ ಜೋಡುಕಲ್ಲು, ಬಿಜೆಪಿ ಕಣ್ಣೂರು ವಲಯ ಅಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್, ವಲಯ ಉಪಾಧ್ಯಕ್ಷ ವಿಜಯಕುಮಾರ್ ರೈ, ಜಿಲ್ಲಾ ಅಧ್ಯಕ್ಷ ಎಸ್.ಪಿ. ಶಾಜಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜನ್ ಮುಳಿಯಾರು, ಬಿಎಂಎಸ್ ಜಿಲ್ಲಾ ಅಧ್ಯಕ್ಷ ಉಪೇಂದ್ರನ್ ಕೋಟೆಕ್ಕಣಿ ಮುಂತಾದವರು ಮಾತನಾಡಿದರು. ಜೋಡುಕಲ್ಲು ಶ್ರೀ ಗಣೇಶ ಮಂದಿರ ಪರಿಸರಕ್ಕೆ ನಿನ್ನೆ ಸಂಜೆ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹಾಗೂ ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಮಠಾಧೀಶ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಭೇಟಿ ನೀಡಿದರು. ಈ ವೇಳೆ ಮಾತ ನಾಡಿದ ಯತಿವರ್ಯರು ಹಿಂದೂ ಧರ್ಮ, ಸಂಸ್ಕೃತಿ, ಹಿಂದೂ ಸಮಾಜ ಹಾಗೂ ಹಿಂದೂ ಧಾರ್ಮಿಕ ಕ್ಷೇತ್ರಗಳ ಸಂರಕ್ಷಣೆಗೆ ಪ್ರತಿಯೊಬ್ಬರೂ ಕಟಿಬದ್ಧ ರಾಗಬೇಕೆಂದು ಕರೆ ನೀಡಿದರು.

RELATED NEWS

You cannot copy contents of this page