ಉಪ್ಪಳ: ವಿವಿಧೆಡೆಗಳಿಂದ ತ್ಯಾಜ್ಯವನ್ನು ತಂದು ರಸ್ತೆ ಬದಿ ಉಪೇಕ್ಷಿಸುತ್ತಿರುವುದು ವ್ಯಾಪಕಗೊಂಡಿದ್ದು, ಇದರ ದುರ್ವಾಸನೆಯಿಂದ ಸ್ಥಳೀಯರಿಗೆ ಹಾಗೂ ಪ್ರಯಾಣಿಕರಿಗೆ ಸಮಸ್ಯೆ ಉಂಟಾಗಿದೆ. ಕೈಕಂಬ-ಬಾಯಾರು ರಸ್ತೆಯ ಬೇಕೂರು ವಿದ್ಯಾತ್ ಸಬ್‌ಸ್ಟೇಶನ್ ಪರಿಸರದ ರಸ್ತೆಯಲ್ಲಿ ಕಳೆದ ಹಲವು ತಿಂಗಳುಗಳಿಂದ ಪ್ಲಾಸ್ಟಿಕ್ ಚೀಲದಲ್ಲಿ ಪ್ಲಾಸ್ಟಿಕ್ ಸಹಿತ ಆಹಾರ ತ್ಯಾಜ್ಯವನ್ನು ಉಪೇಕ್ಷಿಸುತ್ತಿರುವುದಾಗಿ ದೂರಲಾಗಿದೆ. ಇದರಿಂದ ದುರ್ವಾಸನೆ ಬೀರುತ್ತಿದ್ದು, ಸಾರ್ವಜನಿಕರ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ. ಮಾತ್ರವಲ್ಲ ತ್ಯಾಜ್ಯವನ್ನು ತಿನ್ನಲು ನಾಯಿಗಳು ಗುಂಪು ಸೇರುತ್ತಿರುವುದರಿಂದ ನಡೆದು ಹೋಗುವ ಶಾಲಾ ವಿದ್ಯಾರ್ಥಿಗಳ ಸಹಿತ ಮಕ್ಕಳು, ಮಹಿಳೆಯರು ಆತಂಕಗೊಂಡಿದ್ದಾರೆ. ನಾಯಿಗಳು ಪಾದಚಾರಿಗಳನ್ನು, ವಾಹನಗಳನ್ನು ಬೆನ್ನಟ್ಟುತ್ತಿರುವುದಾಗಿ ದೂರಲಾಗಿದೆ. ಈ ಪರಿಸರದಲ್ಲಿ ಸಿಸಿ ಕ್ಯಾಮರಾವನ್ನು ಸ್ಥಾಪಿಸಿ ರಾತ್ರಿ ಹೊತ್ತಿನಲ್ಲಿ ವಾಹನದ ಮೂಲಕ ತ್ಯಾಜ್ಯವನ್ನು ತಂದು ಉಪೇಕ್ಷಿಸುವವರನ್ನು ಪತ್ತೆಹಚ್ಚಿ ಅವರ ವಿರುದ್ಧ ಕ್ರಮಕ್ಕೆ ಸಂಬಂಧಪಟ್ಟ ಅಧಕಾರಿಗಳು ಮುಂದಾಗಬೇಕೆಂದು ಸಾರ್ವನಿಕರು ಆಗ್ರಹಿಸಿದ್ದಾರೆ.







