ಮಾದಕವಸ್ತು ಪ್ರಕರಣ ತಲೆಮರೆಸಿದ್ದ ಉಪ್ಪಳ ನಿವಾಸಿ ಸೆರೆ

ಉಪ್ಪಳ: ಮಾದಕವಸ್ತು ಪ್ರಕರಣದಲ್ಲಿ ಸೆರೆಗೀಡಾದ ಬಳಿಕ ಜಾಮೀನು ಪಡೆದು ಬಿಡುಗಡೆ ಗೊಂಡು ತಲೆಮರೆಸಿಕೊಂಡಿದ್ದ ಉಪ್ಪಳ ನಿವಾಸಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಉಪ್ಪಳ ಪಚ್ಲಂಪಾರೆಯ ಫಸಲ್ (31) ಸೆರೆಗೀಡಾದ ಆರೋಪಿ. 2021ರಲ್ಲಿ ಉಳ್ಳಾಲ ಪೊಲೀಸರು ಈತನನ್ನು ಮಾದಕವಸ್ತು ಪ್ರಕರಣದಲ್ಲಿ ಬಂಧಿಸಿದ್ದರು. ಅನಂತರ ಜಾಮೀನಿನಲ್ಲಿ ಬಿಡುಗಡೆಗೊಂಡ ಈತ ನ್ಯಾಯಾಲಯದಲ್ಲಿ ಹಾಜರಾಗದೆ ತಲೆಮರೆಸಿಕೊಂಡಿದ್ದನು. ಈತ ಉಪ್ಪಳದ ಮನೆಗೆ ತಲುಪಿರುವ ವಿಷಯ ತಿಳಿದು ಉಳ್ಳಾಲ ಪೊಲೀಸರು ಅಲ್ಲಿಗೆ ದಾಳಿ ನಡೆಸಿ ಬಂಧಿಸಿದ್ದಾರೆ.  ಆರೋಪಿಯನ್ನು ಮಂಗಳೂರು ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು, ಈ ವೇಳೆ ಈತನನ್ನು ನ್ಯಾಯಾಲಯ ಜ್ಯುಡೀಶಿಯಲ್ ಕಸ್ಟಡಿಗೆ ಬಿಟ್ಟುಕೊಟ್ಟಿದೆ.

RELATED NEWS

You cannot copy contents of this page