ಉಪ್ಪಳ: ಉಪ್ಪಳ ಗೇಟ್ ಆಸು ಪಾಸಿನಲ್ಲಿ ನಿರಂತರ ವಾಹನ ಅಪ ಘಾತಗಳು ಸಂಭವಿಸುತ್ತಿದ್ದು ಸಾರ್ವ ಜನಿಕರಲ್ಲಿ ಆತಂಕ ಸೃಷ್ಟಿಸಿದೆ. ಕಳೆದ ಒಂದು ತಿಂಗಳಲ್ಲಿ ಹಲವಾರು ವಾಹನ ಗಳು ಅಪಘಾತಕ್ಕೀಡಾಗಿ ಹಲವಾರು ಮಂದಿ ಗಾಯಗೊಂಡಿರುವAತೆ ನಿನ್ನೆ ರಾತ್ರಿ ಸುಮಾರು 10.30ರ ವೇಳೆ ಮತ್ತೆ ಉಪ್ಪಳ ಗೇಟ್ ಬಳಿಯಲ್ಲಿ ಕಾರುಗಳು ಢಿಕ್ಕಿ ಹೊಡೆದಿವೆ. ಮಂಗಳೂರು ಭಾಗದಿಂದ ಕಾಸರಗೋಡು ಕಡೆಗೆ ಸಂಚರಿಸುತ್ತಿರುವ ಎರಡು ಕಾರುಗಳ ಮಧ್ಯೆ ಅಪಘಾತ ಸಂಭವಿಸಿದೆ. ಈ ವೇಳೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರಿಗೆ ಸಣ್ಣಪುಟ್ಟ ಗಾಯಗೊಂಡಿರುವುದಾಗಿ ತಿಳಿದುಬಂದಿದೆ.
