ರೈಲಿನಲ್ಲಿ ಯುವತಿಯ 30ಗ್ರಾಂ ಚಿನ್ನಾಭರಣ, ಹಣ ಕಳವುಗೈದ ಆರೋಪಿ ಬಂಧನ

ಕಾಸರಗೋಡು: ಹೈದರಾಬಾದ್ ನಿವಾಸಿಯಾದ ಯುವತಿಯ 30 ಗ್ರಾಂ ತೂಕದ ಚಿನ್ನದ ಸರ, 12 ಗ್ರಾಂ ತೂಕದ ಚಿನ್ನದ ಬಳೆ, ಫಾಸ್ಟ್‌ಟ್ರಾಕ್ ವಾಚ್, ಐಫೋನ್ ಚಾರ್ಜರ್, 1050 ರೂ. ಒಳಗೊಂಡ ಹ್ಯಾಂಡ್‌ಬ್ಯಾಗ್ ಕಳವುಗೈದ ಆರೋಪಿಯನ್ನು ಸೆರೆ ಹಿಡಿಯಲಾಗಿದೆ. ತಿರುವನಂತಪುರ ನೆಡುಮಂಗಾಡ್ ಆನಾಡ್ ನಿವಾಸಿ ಅಶ್ವಿನ್ (24) ಎಂಬಾತನನ್ನು ಕಾಸರ ಗೋಡು ರೈಲ್ವೇ ಪೊಲೀಸರು ಬಂಧಿಸಿ ದ್ದಾರೆ. ಇದೇ ರೀತಿಯ ಇನ್ನೊಂದು ಪ್ರಕರಣದಲ್ಲಿ ತಿರುನಲ್‌ವೇಲಿ ರೈಲ್ವೇ ಪೊಲೀಸರು ಇಡುಕ್ಕಿಯಿಂದ ಈತನನ್ನು ಸೆರೆಹಿಡಿದಿದ್ದರು. ಈ ವಿಷಯ ತಿಳಿದ ಕಾಸರಗೋಡು ರೈಲ್ವೇ ಪೊಲೀಸರು ತಿರುನಲ್‌ವೇಲಿಗೆ ತೆರಳಿ ಅಲ್ಲಿನ ಜೈಲಿನಿಂದ ಆರೋಪಿಯನ್ನು ಕಸ್ಟಡಿಗೆ ಪಡೆದು ಕಾಸರಗೋಡಿಗೆ ತಲುಪಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಕಳವುಗೈದ ಚಿನ್ನವನ್ನು ತೃಶೂರಿನ ಜ್ಯುವೆಲ್ಲರಿಯೊಂ ದರಲ್ಲಿ ಮಾರಾಟಗೈದಿರುವುದಾಗಿ ಪತ್ತೆಹಚ್ಚಲಾಗಿದೆ.

ಕಳೆದ ಆಗಸ್ಟ್ 26 ಮತ್ತು 27ರ ಮಧ್ಯೆ ಕಚ್ಚಿಗುಡೆಯಿಂದ ಮುರುಡೇಶ್ವರ ವರೆಗೆ ತೆರಳುವ ರೈಲಿನಲ್ಲಿ ಹೈದರಾಬಾದ್ ನಿವಾಸಿಯಾದ ಯುವತಿಯ ಚಿನ್ನಾ ಭರಣಗಳನ್ನೊ ಳಗೊಂಡ ಬ್ಯಾಗ್‌ನ್ನು ಆರೋಪಿ ಕಳವು ನಡೆಸಿದ್ದಾನೆ. ಚಿನ್ನಾಭರಣ ಕಳವುಗೀಡಾದ ಬಗ್ಗೆ ಯುವತಿ ಕಾಸರಗೋಡು ಪೊಲೀಸರಿಗೆ ದೂರು ನೀಡಿದ್ದಳು. ಎಸ್‌ಎಚ್‌ಒ ರೆಜಿ ಕುಮಾರ್ ನೇತೃತ್ವದಲ್ಲಿ ಎಸ್.ಐ. ವೇಣುಗೋಪಾಲ್, ಸೀನಿಯರ್ ಪೊಲೀಸರ್ ಆಫೀಸರ್‌ಗಳಾದ ವಿಪಿನ್ ಮ್ಯಾಥ್ಯು, ಸುಧೀಶ್, ಸುಶಾಂತ್ ಎಂಬಿ ವರು ಆರೋಪಿಯನ್ನು ಸೆರೆಹಿಡಿದಿದ್ದಾರೆ. ಆರೋಪಿ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಾಗಿ 10ರಷ್ಟು ಕಳವು ಪ್ರಕರಣಗಳು ದಾಖಲಾಗಿವೆಯೆಂದು ಪೊಲೀರು ತಿಳಿಸಿದ್ದಾರೆ.

You cannot copy contents of this page