ಕಾಸರಗೋಡು: ಮನೆಯಿಂದ ನಗ-ನಗದು ಕಳವುಗೈದ ಪ್ರಕರಣದ ಆರೋಪಿಯನ್ನು ವಿದ್ಯಾನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಯು.ಪಿ. ವಿಪಿನ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.
ಮಂಜೇಶ್ವರ ಕುಂಡುಕೊಳಕೆ ಸಫ್ರೀನಾ ಮಂಜಿಲ್‌ನ ಮೊಹಮ್ಮದ್ ಶಿಹಾಬ್ (32) ಬಂಧಿತ ಆರೋಪಿ. ಕಳೆದ ಅಗೋಸ್ತ್ ೬ರಂದು ರಾತ್ರಿ ಚೆಂಗಳ ನಾಲ್ಕನೇ ಮೈಲು ರಿಸ್ವಾನ್ ಮಂಜಿಲ್‌ನ ಸತ್ತಾರ್ ಕೆ.ಎ ಎಂಬವರ ಮನೆಯ ಬೀಗ ಮುರಿದು ಒಳಗೆ ನುಗ್ಗಿ ಕಪಾಟಿನಲ್ಲಿದ್ದ ೧೫ ಪವನ್ ಚಿನ್ನದೊಡವೆ ಮತ್ತು ೫೦ ಸಾವಿರ ರೂ. ನಗದು ಕಳವುಗೈದ ಪ್ರಕರಣದಲ್ಲಿ ಈತನನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಕರ್ನಾಟಕ ಇನ್ನೋರ್ವ ಆರೋಪಿ ಶಾಮೀಲಾಗಿರುವುದಾಗಿ ತನಿಖೆಯಲ್ಲಿ ಸ್ಪಷ್ಟಗೊಂಡಿದ್ದು, ಆ ಹಿನ್ನೆಲೆಯಲ್ಲಿ ಆತನ ಪತ್ತೆಗಾಗಿರುವ ಶೋಧ ಕಾರ್ಯಾಚರಣೆ ನಡೆಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.ಬಂಧಿತ ಆರೋಪಿ ಮಂಜೇ ಶ್ವರದಲ್ಲಿ ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ವೇಳೆ ಮಂಜೇಶ್ವರ ಪೊಲೀಸರು ಆತನನ್ನು ವಶಕ್ಕೆ ತೆಗೆದು ಕೊಂಡಿದ್ದರು. ಬಳಿಕ ವಿಚಾರಣೆಗೊಳ ಪಡಿಸಿದಾಗ ಆತ ಚೆಂಗಳದ ಮನೆಯಲ್ಲಿ ನಡೆದ ಕಳವು ಪ್ರಕರಣದ ಆರೋಪಿ ಯಾಗಿರುವುದಾಗಿ ಪೊಲೀಸರ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಬಳಿಕ ಆತನನ್ನು ವಿದ್ಯಾನಗರ ಪೊಲೀಸರಿಗೆ ಹಸ್ತಾಂತರಿಸಲಾಯಿತು. ಬಂಧಿತನ ವಿರುದ್ಧ ಅಂಬಲತ್ತರ, ಬೇಕಲ, ಚಂದೇರ ಮತ್ತು ಕರ್ನಾಟಕದ ವಿವಿಧ ಪೊಲೀಸ್ ಠಾಣೆಗಳಲ್ಲಾಗಿ ಐದು ಕಳವು ಕೇಸುಗಳಿವೆ ಯೆಂದು ಪೊಲೀಸರು ತಿಳಿಸಿದ್ದಾರೆ.