ಕುಂಬಳೆ: ಕುಂಬಳೆ ರೈಲ್ವೇ ನಿಲ್ದಾಣ ಪರಿಸರದಲ್ಲಿ ನವಂಬರ್ 17ರಂದು ಬೆಳಿಗ್ಗೆ ನಿಲ್ಲಿಸಿದ್ದ ಸ್ಕೂಟ ರನ್ನು ಕಳವುಗೈದ ಪ್ರಕರಣದ ಆರೋಪಿಯನ್ನು ಸೆರೆಹಿಡಿಯಲಾ ಗಿದೆ. ಕಣ್ಣೂರು ಒಟ್ಟತ್ತಾಯಿ ವೆಳ್ಳಾಡ್‌ನ ಅಲೆಕ್ಸ್ ಡೊಮಿನಿಕ್ ಎಂಬಾತ ಬಂಧಿತ ಆರೋಪಿಯಾಗಿ ದ್ದಾನೆ. ಹಲವು ಸಿಸಿ ಟಿವಿ ದೃಶ್ಯಗಳು ಹಾಗೂ ಸಂಶಯಾಸ್ಪದ ವ್ಯಕ್ತಿಗಳ ಫೋನ್ ಕರೆಗಳನ್ನು ಹಿಂಬಾಲಿಸಿ ಆರೋಪಿಯ ಗುರುತು ಹಚ್ಚಲು ಸಾಧ್ಯವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಮಂಗಳೂರಿಗೆ ಬರುತ್ತಿದ್ದಾನೆಂದು ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಕುಂಬಳೆ ಪೊಲೀಸರು ಮಂಗಳೂರಿಗೆ ತೆರಳಿದ್ದರು. ಆದರೆ ಮಂಗಳೂರಿನಲ್ಲಿ ನಡೆದ ಮತ್ತೊಂದು ಕಳವು ಪ್ರಕರಣದಲ್ಲಿ ಅಲೆಕ್ಸ್ ಡೊಮಿನಿಕ್ ಸಹಿತ ಇಬ್ಬರನ್ನು ಕಂಕನಾಡಿ ಪೊಲೀಸರು ಬಂಧಿಸಿದ್ದರು. ಆರೋಪಿಯನ್ನು ಕಸ್ಟಡಿಗೆ ತೆಗೆದು ಇಂದು ಮಾಹಿತಿ ಸಂಗ್ರಹಿಸಲಾ ಗುವುದೆಂದು ಪೊಲೀಸರು ತಿಳಿಸಿದ್ದಾರೆ. ಕಾಸರಗೋಡು ಎಎಸ್ಪಿ ನಂದಗೋ ಪನ್‌ರ ನೇತೃತ್ವದಲ್ಲಿ ನಡೆದ ಸಮಗ್ರ ತನಿಖೆಯಲ್ಲಿ ಆರೋಪಿಯ ಗುರುತು ಹಚ್ಚಲು ಸಾಧ್ಯವಾಗಿದೆ. ಕುಂಬಳೆ ಇನ್‌ಸ್ಪೆಕ್ಟರ್ ಮುಕುಂದನ್ ತನಿಖೆಗೆ ನೇತೃತ್ವ ನೀಡಿದ್ದಾರೆ. ಕುಂಬಳೆ ಎಸ್‌ಐ ಪ್ರದೀಪ್ ಕುಮಾರ್, ಎಸ್ಪಿಯ ಕ್ರೈಂ ಸ್ಕ್ವಾಡ್ ಸದಸ್ಯರಾದ ಶೈಜು ಉಣ್ಣಿ, ಜಿನೀಶ್ ಎಂಬಿವರು ಆರೋಪಿಯನ್ನು ಬಂಧಿಸಿದ ಪೊಲೀಸ್ ತಂಡದಲ್ಲಿದ್ದರು.







