‘ಪಿಟ್’ ಎನ್‌ಡಿಪಿಎಸ್ ಆಕ್ಟ್ ಪ್ರಕಾರ ಹಲವು ಪ್ರಕರಣಗಳ ಆರೋಪಿ ಸೆರೆ

ಕಾಸರಗೋಡು: ಹಲವು ಮಾದಕದ್ರವ್ಯ ಪ್ರಕರಣಗಳ  ಆರೋಪಿಯನ್ನು ಪಿಚ್ ಎನ್‌ಡಿಪಿಎಸ್ ಆಕ್ಟ್ ಪ್ರಕಾರ ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. ಹೊಸದುರ್ಗ ಞಣಿಕಡವು ಮಯ್ಯತ್ತ್ ರಸ್ತೆ ಬಳಿ ನಿವಾಸಿ ಅರ್ಶಾದ್ ಕೆ. (33) ಬಂಧಿತ ಆರೋಪಿ. ಈತನನ್ನು ಬಳಿಕ ಜೈಲಿಗೆ ಸಾಗಿಸಲಾಗಿದೆ. ಹೊಸದುರ್ಗ ಬೇಕಲ, ಚಂದೇರ ಮತ್ತು ಪಯ್ಯನ್ನೂರು ಪೊಲೀಸ್ ಠಾಣೆಗಳಲ್ಲಾಗಿ ದಾಖಲುಗೊಂಡ ಆರು ಮಾದಕದ್ರವ್ಯ ಪ್ರಕರಣಗಳು ಸೇರಿದಂತೆ ಹತ್ತರಷ್ಟು ಪ್ರಕರಣಗಳಲ್ಲಿ ಈತ ಆರೋಪಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ನಿರಂತರವಾಗಿ ಮಾದಕದ್ರವ್ಯ ಮಾರಾಟದಂಧೆಯಲ್ಲಿ ನಿರತರಾಗಿರುವವರ ಮೇಲೆ ಹೇರಲಾಗುವ ಪ್ರಿವೆನ್ಶನ್ ಆಫ್ ಇಲ್ಲಾಸಿಟ್ ಟ್ರಾಫಿಕ್ (ಪಿಟ್) ಎನ್‌ಡಿಪಿಎಸ್ ಕಾನೂನು ಪ್ರಕಾರ ಈತನನ್ನು ಬಂಧಿಸಲಾಗಿದೆ. ಹೀಗೆ ಈ ಕಾನೂನು ಪ್ರಕಾರ ಜಿಲ್ಲೆಯಲ್ಲಿ ಈತನಕ ಬಂಧಿತರಾದವರ ಪೈಕಿ ಏಳನೇ ವ್ಯಕ್ತಿಯಾಗಿದ್ದಾನೆ ಈತ.

ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಬಿ.ವಿ. ವಿಜಯ ಭರತ್ ರೆಡ್ಡಿಯವರ ನಿರ್ದೇಶ ಪ್ರಕಾರ ಹೊಸದುರ್ಗ ಡಿವೈಎಸ್‌ಪಿ ಕೆ. ಸುನಿಲ್ ಕುಮಾರ್‌ರ ಮೇಲ್ನೋಟದಲ್ಲಿ ಹೊಸದುರ್ಗ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಪಿ. ಅಜಿತ್ ಕುಮಾರ್, ಎಸ್‌ಐ ವಿಷ್ಣು ಪ್ರಸಾದ್, ಎಎಸ್‌ಐ ಪ್ರಕಾಶನ್, ಇತರ ಪೊಲೀಸ್ ಸಿಬ್ಬಂದಿಗಳಾದ ಎ. ಸನೀಶ್ ಕುಮಾರ್, ಶ್ರೀಜೇಶ್ ವಿ, ಮತ್ತು ರಂಜಿತ್ ಎಂಬವರನ್ನೊಳಗೊಂಡ ಪೊಲೀಸರ ತಂಡ ಅರ್ಶಾದ್‌ನನ್ನು ಬಂಧಿಸಿದೆ.

You cannot copy contents of this page